ಮಂಗಳೂರು (ದಕ್ಷಿಣ ಕನ್ನಡ): ವಕ್ಫ್ ತಿದ್ದುಪಡಿ ಮಸೂದೆ ವಿರುದ್ದ ಎಸ್.ಐ. ಓ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಇಂದು ಪ್ರತಿಭಟನೆ ನಡೆಯಿತು. ಇದೇ ವೇಳೆ ಪ್ರತಿಭಟನಾಕಾರರು ವಕ್ಫ್ ತಿದ್ದುಪಡಿ ಮಸೂದೆಯನ್ನು ಹರಿದು ಹಾಕಿದ್ರು. ಪ್ರತಿಭಟನೆಯಲ್ಲಿ ಇಕ್ರಾ ಅರೆಬಿಕ್ ಕಾಲೇಜಿನ ಫರ್ಹಾನ್ ನದ್ವಿ ಮಾತನಾಡಿ, ವಕ್ಫ್ ಆಸ್ತಿ ಎಂಬುದು ಹಿರಿಯರು ಪರಲೋಕ ಮೋಕ್ಷಗಾಗಿ ಮುಸಲ್ಮಾನ ಸಮುದಾಯದ ಏಳಿಗೆಗೆ ದಾನ ಮಾಡಿದ ಸೊತ್ತಾಗಿದೆ ಅಂದರು.
ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಆಸೀಫ್ ಡಿಕೆ ಮಾತನಾಡಿ, ಮುಸ್ಲಿಂ ಸಮುದಾಯ ತಮ್ಮ ಎಲ್ಲ ಬಿಕ್ಕಟ್ಟು ಬಿಟ್ಟು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ಐಕ್ಯರಾಗಬೇಕು ಎಂದರು.
ಇನ್ನು ಯುನಿವೆಫ್ ಕರ್ನಾಟಕದ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ಮಸೂದೆ ವಿರುದ್ಧ ಪ್ರತಿಭಟನೆ ಹಿಂದೂ- ಮುಸ್ಲಿಂ ಹೋರಾಟವಲ್ಲ. ಅದು ಸಂವಿಧಾನ ನಮಗೆ ನೀಡಿರುವ ಸೌಲಭ್ಯಗಳನ್ನು ವಂಚಿಸುತ್ತಿರುವ ವಿರುದ್ದವಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಒಂದೇ ಒಂದು ಇಂಚು ಭೂಮಿ ಮುಸ್ಲಿಮರು ಬಿಟ್ಟು ಕೊಡುವುದಿಲ್ಲ. ಈ ಮಸೂದೆಯನ್ನು ಎಂದಿಗೂ ಮುಸ್ಲಿಂ ಸಮುದಾಯ ಒಪ್ಪಲು ಸಾಧ್ಯವಿಲ್ಲ ಎಂದರು.
ಮಾಜಿ ಮೇಯರ್ ಅಶ್ರಫ್ ಕುದ್ರೋಳಿ, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅಸ್ಲಾಂ ಉಪ್ಪಿನಂಗಡಿ, ಸಾಮಾಜಿಕ ಹೋರಾಟಗಾರ ಕೆ.ಎಂ ಅಶ್ರಫ್ ಮಂಗಳೂರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಎಸ್ಐ.ಓ ಸದಸ್ಯ ಅರ್ಫ್ ಉಳ್ಳಾಲ ಘೋಷಣೆ ಕೂಗಿದರು ರಾಫಿ ಬೆಂಗರೆ ಸ್ವಾಗತಿಸಿದರು. ಹುನೈನ್ ಧನ್ಯವಾದಗೈದರು.