Wednesday, January 14, 2026
Google search engine

Homeರಾಜ್ಯಮಂಗಳೂರು ಪುರಭವನದಲ್ಲಿ ನಡೆಯಲಿದೆ ಅನುಪಮ ಓದುಗರ "ಬೆಳ್ಳಿ ಹಬ್ಬ ಸಮಾವೇಶ" 

ಮಂಗಳೂರು ಪುರಭವನದಲ್ಲಿ ನಡೆಯಲಿದೆ ಅನುಪಮ ಓದುಗರ “ಬೆಳ್ಳಿ ಹಬ್ಬ ಸಮಾವೇಶ” 

ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದೆ. ಈ ವಿಶೇಷಾಂಕವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಕಾವೇರಿ ನಿವಾಸದಲ್ಲಿ ಇದೀಗಾಗಲೇ ಬಿಡುಗಡೆಗೊಳಿಸಿದ್ದಾರೆ.

ಈ ಬೆಳ್ಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಪುರಭವನದಲ್ಲಿ ಜನವರಿ 15ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಅನುಪಮ ಮಹಿಳಾ ಓದುಗರ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಮತ್ತು ಬೆಳ್ಳಿ ಹಬ್ಬದ ಸಂಭ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀಮತಿ ಡಾ| ಕೆ. ಶರೀಫಾ ಉದ್ಘಾಟಿಸಲಿದ್ದಾರೆ. 

ಗೌರವ ಅತಿಥಿಗಳಾಗಿ, ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಡಾ| ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಮಂಗಳೂರು ನಗರ ಪೊಲೀಸ್ (ಸಂಚಾರ ವಿಭಾಗ) ACP ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಮತ್ತು ಮಾಜಿ ವಿಧಾನಸಭೆ ಸದಸ್ಯೆ ಒಐಂ ಶಕುಂತಲಾ ಶೆಟ್ಟಿ, ಬೆಥನಿ ಸೈಂಟ್ ತೆರೇಸಾ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್, ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ, ಆಪ್ತ ಸಮಾಲೋಚಕಿ ಡಾ| ರುಕ್ಸಾನ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಕೆ.ಎ. ರೋಹಿಣಿ, ಸರಸ ಬಿ. ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ., ಆಯಿಶಾ ಇ. ಶಾಫಿ ಅವರನ್ನು ಸನ್ಮಾನಿಸಲಾಗುವುದು. ಅದರೊಂದಿಗೆ ಕಾರ್ಯಕ್ರಮದಲ್ಲಿ ಓದುಗರು ತಮ್ಮ ಅನಿಸಿಕೆಯನ್ನು ನೀಡಲಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ.

ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್, ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಹನಾಝ್ ಎಂ. ಮಾತನಾಡಿದ್ದು, ಉಪ ಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದ್ದಾರೆ. ಉಳಿದಂತೆ ಅನುಪಮ ಸಂಪಾದಕ ಮಂಡಳಿಯ ಸಮೀನಾ ಯು. ಸಾಜಿದಾ ಮೂಮಿನ್, ಕಾರ್ಯಕ್ರಮದ ಸ್ವಾಗತ ಸಮತಿ ಸದಸ್ಯರುಗಳಾದ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಲೇಖಕಿ ಶ್ರೀಮತಿ ಸುಖಾಲಾಕ್ಷಿ, ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ., ಹಿದಾಯ ಫೌಂಡೇಶನ್ ಟ್ರಸ್ಟಿ ಖುರ್ಷಿದಾ ಹಾಗೂ ಮುಝಾಹಿರ ಉಪಸ್ಥಿತರಿದ್ದರು.

ಅನುಪಮ ಕಿರು ಪರಿಚಯ: ಪತ್ರಿಕೋದ್ಯಮವು ಪುರುಷರ ಕ್ಷೇತ್ರವೆಂಬ ಮಾತು ತುಂಬಾ ಪುರಾತನವಾಗಿದೆ. ಈಗ ಮಹಿಳೆಯರು ಈ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನೂರಾರು ಮಹಿಳಾ ಪತ್ರಕರ್ತೆಯರು ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೂ ಸ್ತ್ರೀಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಹೀಗಿದ್ದರೂ ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತೀರಾ ನಗಣ್ಯವೆನ್ನಬಹುದು.

ಇಂತಹ ಸಂದರ್ಭದಲ್ಲಿ 2000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಸ್ತ್ರೀಯರಿಂದಲೇ ಅನುಪಮ’ ಎಂಬ ಮಾಸ ಪತ್ರಿಕೆ ಆರಂಭಗೊಂಡಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆ. ಅನುಪಮ’ ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಧ್ವನಿ ನೀಡಿದೆ.

ಇಂದು, ಹೆಚ್ಚಿನ ಪತ್ರಿಕೆಗಳು ವಿಷಯ ಲಂಪಟತನ, ಸ್ತ್ರೀ ಸೌಂದರ್ಯ, ನಗ್ನ ಪ್ರಿಯತೆಯನ್ನು ನೆಚ್ಚಿನ ಸುದ್ದಿಯಾಗಿಸಿರುವುದು ಎಲ್ಲರೂ ಬಲ್ಲರು. ಆದರೆ ಅನುಪಮ' ಶುದ್ಧ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿದೆ. ಹಿಂಸೆ, ಕಲಹ, ಒಡಕು, ಕೋಮು ಪಕ್ಷಪಾತ ಇತ್ಯಾದಿ ಕೆಡುಕುಗಳುಅನುಪಮ’ಕ್ಕೆ ಅಪರಿಚಿತವಾಗಿವೆ. ಇಂದು ಮಹಿಳೆಯರ ಸುಧಾರಣೆಯ ಹೆಸರಲ್ಲಿ ಶೋಷಣೆ ನಡೆಯುವುದೇ ಹೆಚ್ಚು. ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆ ದರ್ಶನವಾಗುವುದು ಜಾಸ್ತಿ.

ಮಾಹಿತಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular