ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದ ನಡವಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಈ ಸರ್ಕಾರಕ್ಕೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ” ಎಂದು ಭವಿಷ್ಯ ನುಡಿದರು. ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಪ್ರಕರಣದ ಆರಂಭಿಕ ಹಂತದಲ್ಲಿಯೇ ಸರ್ಕಾರ ಎಸ್ಐಟಿ ತನಿಖೆ ಎಂಬ ನಾಟಕವಾಡಿದುದು ಸ್ಪಷ್ಟವಾಗಿದೆ ಎಂದರು.
“ಧರ್ಮವನ್ನು ನಾನು ಬೆರೆಸಲಾರೆ. ಆದರೆ ಸರ್ಕಾರದ ನಡೆ ಕ್ಷೇತ್ರಕ್ಕೆ ಅವಮಾನವಾಗುವ ರೀತಿಯದ್ದು. ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡಿದ್ದು ದ್ವಾರಕನಾಥ್. ಸಿಎಂಗೆ ದೂರು ನೀಡಿದ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಯಿತು. ಇದಕ್ಕೆ ಎಡಪಂಥೀಯ ಶಕ್ತಿಗಳ ಪ್ರಭಾವ ಇದೆ ಎನ್ನಲಾಗುತ್ತಿದೆ. ಯಾರಿದ್ದಾರೆ ಎಂಬುದು ಶೀಘ್ರವೇ ಬಹಿರಂಗವಾಗಲಿದೆ,” ಎಂದ ಅವರು, ಪ್ರಕರಣದ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.