ಮಂಡ್ಯ: ರೈತರಿಂದ ಖರೀದಿಸುವ ಪ್ರತಿ ಲೀ ಹಾಲಿಗೆ ೧.೫೦ ರೂ. ಕಡಿತ ತೀವ್ರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ
ರೈತರಿಗೆ ಗಾಯದ ಮೇಲೆ ಬರೆ ಎಳೆದ ಜಿಲ್ಲಾ ಹಾಲು ಒಕ್ಕೂಟ ಎಂದು ರೈತರು ಆಕ್ರೋಶ ವ್ಯಕ್ತಪಡಿದರು.
ಡಿ.೧ ರಿಂದ ಜಾರಿ ಮಾಡಿ ಪ್ರತಿ ಲೀಟರ್‌ಗೆ ಸರಿ ಸುಮಾರು ೧.೫೦ ಪೈಸೆ ಕಡಿತ. ಪರಿಷ್ಕೃತ ದರದ ಬಗ್ಗೆ ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕರಿಂದ ಆದೇಶ. ಉತ್ಪಾದಕರಿಗೆ ನೀಡುತ್ತಿದ್ದ ೩೩.೫೦ರ ಬದಲು ೩೨ ನೀಡಲು ಆಡಳಿತ ಮಂಡಳಿ ತೀರ್ಮಾನ
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತಾತ್ವರ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಳೆದ ೯೦ ದಿನಗಳಿಂದ ನಿರಂತರ ಧರಣಿ ನಡೆಯುತ್ತಿದೆ. ಏಕಾಏಕಿ ಹಾಲಿನ ದರ ಕಡಿತಗೊಳಿಸಿ ರೈತರ ಆಕ್ರೋಶಕ್ಕೆ ಕಾರಣವಾದ ಮನ್ಮುಲ್ ನಡೆ.