Friday, April 11, 2025
Google search engine

Homeರಾಜ್ಯಸುದ್ದಿಜಾಲಮಂಟಿಬಿಳಗುಲಿ ಡೈರಿಗೆ 2,62 ಲಕ್ಷ ರೂ ನಿವ್ವಳ ಲಾಭ

ಮಂಟಿಬಿಳಗುಲಿ ಡೈರಿಗೆ 2,62 ಲಕ್ಷ ರೂ ನಿವ್ವಳ ಲಾಭ

ಬೆಟ್ಟದಪುರ: ಮಂಟಿಬಿಳಗುಲಿ ಹಾಲು ಉತ್ಪಾದಕರ ಸಂಘವು 2022-23ನೇ ಸಾಲಿನಲ್ಲಿ 2,62,435ರೂ. ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಹೇಳಿದರು.
ಬೆಟ್ಟದಪುರ ಸಮೀಪದ ಮಂಟಿಬಿಳಗುಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಉತ್ಪಾದಕರು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಹಾಲಿಗೆ ಕಲಬೆರಕೆ ಮಾಡಬಾರದು. ಮೈಮುಲ್ ವತಿಯಿಂದ ದೊರೆಯುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್ ಕುಮಾರ್, ಉಪಾಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ನಾಗೇಗೌಡ, ಸವಲೇಗೌಡ, ಬಿ.ಎಂ ಮಲ್ಲೇಶ್, ಜಗದೀಶ್, ಸುಬ್ಬನಾಯಕ, ಕಾಂತೆಗೌಡ, ಪ್ರೇಮಮ್ಮ, ಪಾರ್ವತಮ್ಮ, ತಿಮ್ಮಮ್ಮ, ಶಾಂತಮ್ಮ, ಕಾರ್ಯದರ್ಶಿ ಬಿ.ಕೆ ಸತೀಶ್, ಸಿಬ್ಬಂದಿ ಸುರೇಶ್ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular