Friday, April 11, 2025
Google search engine

Homeಅಪರಾಧಮರಕುಂಬಿ ಪ್ರಕರಣ: 99 ಮಂದಿ ಇಂದು ಬಿಡುಗಡೆ

ಮರಕುಂಬಿ ಪ್ರಕರಣ: 99 ಮಂದಿ ಇಂದು ಬಿಡುಗಡೆ

ಬಳ್ಳಾರಿ: ಮರಕುಂಬಿ ಹಿಂಸಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 99 ಅಪರಾಧಿಗಳಿಗೆ ಜಾಮೀನು ಮಂಜೂರಾಗಿದ್ದು, ಇಂದು ಎಲ್ಲರನ್ನೂ ಪೊಲೀಸರು ಬಿಡುಗಡೆ ಮಾಡಲಿದ್ದಾರೆ. ಭದ್ರತೆ ಮತ್ತು ರೂ 50,000 ಬಾಂಡ್ ಅನ್ನು 99 ಮಂದಿ ಸಲ್ಲಿಸಿದ್ದರು. ಜಾಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಕೆಳಹಂತದ ನ್ಯಾಯಾಲಯದಿಂದ ಬಿಡುಗಡೆಗೆ ಆದೇಶ ಬಂದಿದ್ದು ಶನಿವಾರ ಬಿಡುಗಡೆ ಆಗುವರು ಎಂದು ಬಳ್ಳಾರಿ ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ.

ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ ಒಬ್ಬ ಅಪರಾಧಿ ಶಿಕ್ಷೆ ಪ್ರಕಟವಾದ ದಿನವೇ ಮೃತಪಟ್ಟಿದ್ದ. 100 ಜನರನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ಪೈಕಿ ಪ್ರಕರಣದ ಆರೋಪಿ ಎ1 ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಸದ್ಯ 99 ಮಂದಿಗೆ ಜಾಮೀನು ಸಿಕ್ಕಿದೆ.

RELATED ARTICLES
- Advertisment -
Google search engine

Most Popular