ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಏ.21 ರಂದು ಬೆಳಿಗ್ಗೆ 07 ಗಂಟೆಗೆ ನಗರದ ರೈಲ್ವೇ ನಿಲ್ದಾಣ ಮುಂಭಾಗದ ಆವರಣದಿಂದ ಮ್ಯಾರಾಥಾನ್ ಓಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.
ಮ್ಯಾರಾಥಾನ್ ಓಟ ಮಾರ್ಗ: ಮ್ಯಾರಾಥಾನ್ ಓಟವು ರೈಲ್ವೇ ನಿಲ್ದಾಣ ಮುಂಭಾಗದ ಆವರಣದಿಂದ ಆರಂಭವಾಗಿ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಮಾರ್ಗವಾಗಿ ರೈಲ್ವೇ ಮೊದಲನೇ ಗೇಟ್(ಮೊಹಮ್ಮದೀಯ ಸ್ಕೂಲ್)-ಕೌಲ್‍ಬಜಾರ್ ಪೊಲೀಸ್ ಠಾಣೆ- ಬೆಳಗಲ್ ಕ್ರಾಸ್- ರೇಡಿಯೋ ಪಾರ್ಕ್ ಮೂಲಕ ಸರ್ಕಾರಿ ಐಟಿಐ ಕಾಲೇಜ್ ಮೈದಾನದಲ್ಲಿ ತಲುಪಿ ಅಂತ್ಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.