Friday, April 4, 2025
Google search engine

Homeಕಾಡು-ಮೇಡುಬಂಡೀಪುರ ರಸ್ತೆಯಲ್ಲಿ ಕುಂಟುತ್ತ ಸಾಗಿದ ಮರಿಯಾನೆ

ಬಂಡೀಪುರ ರಸ್ತೆಯಲ್ಲಿ ಕುಂಟುತ್ತ ಸಾಗಿದ ಮರಿಯಾನೆ

ಗುಂಡ್ಲುಪೇಟೆ: ಮರಿಯಾನೆಯೊಂದರ ಎಡಗಾಲಿಗೆ ಗಂಭೀರ ಗಾಯವಾಗಿ ಕುಂಟುತ್ತ ರಸ್ತೆ ದಾಟಿದ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಹೆದ್ದಾರಿ ರಸ್ತೆಯಲ್ಲಿ ನಡೆದಿದ್ದು, ಈ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗ ಮಧ್ಯೆ ರಸ್ತೆಯಲ್ಲಿ ಮರಿಯಾನೆಯೊಂದು ತಾಯಿ ಮತ್ತು ಇತರೆ ಎರಡು ಆನೆಗಳ ಜೊತೆ ರಸ್ತೆ ದಾಟಿದೆ. ಈ ವೇಳೆ ಮರಿಯಾನೆ ಕಾಲು ನೋವಿನಿಂದ ಬಳಲುತ್ತಿದ್ದ ಹಿನ್ನಲೆ ಕುಂಟುತ್ತ ಸಾಗಿದೆ ಎನ್ನಲಾಗುತ್ತಿದೆ. ಆದರೆ ಆನೆ ಕುಂಟುತ್ತ ತೆರಳಲು ನಿಖರ ಕಾರಣ ತಿಳಿದು ಬಂದಿಲ್ಲ. ಗಾಯಗೊಂಡ ಮರಿಯಾನೆಗೆ ಚಿಕಿತ್ಸೆಯ ಅಗತ್ಯವಿದೆ.

ಈ ಬಗ್ಗೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ ಕುಮಾರ್ ಪ್ರತಿಕ್ರಿಯೆ ನೀಡಿ, ಮರಿಯಾನೆ ಕುಂಟುತ್ತ ರಸ್ತೆ ದಾಟಿರುವ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸುವಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular