Monday, April 21, 2025
Google search engine

Homeಸಿನಿಮಾ“ಮಾರಿಗೆ ದಾರಿ’: ಚಿತ್ರೀಕರಣ ಮುಗಿಸಿದ ನವ ತಂಡ

“ಮಾರಿಗೆ ದಾರಿ’: ಚಿತ್ರೀಕರಣ ಮುಗಿಸಿದ ನವ ತಂಡ

ಟೈಟಲ್‌ ನಲ್ಲಿ ವಿಭಿನ್ನತೆ ಮೆರೆಯಬೇಕು, ಈ ಮೂಲಕ ಮೊದಲ ನೋಟದಲ್ಲೇ ಗಮನ ಸೆಳೆಯಬೇಕೆಂದು ಪ್ರಯತ್ನಿಸುವ ತಂಡಗಳು ಹಲವು. ಈ ಸಾಲಿಗೆ ಹೊಸ ಸೇರ್ಪಡೆ “ಮಾರಿಗೆ ದಾರಿ’. ಹೀಗೊಂದು ಟೈಟಲ್‌ ನಡಿ ಸಿನಿಮಾ ಆರಂಭವಾಗಿ, ಚಿತ್ರೀಕರಣ ಮುಗಿಸಿದೆ.

ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಹೀರೋ ಕ್ಯಾರೆಕ್ಟರ್‌ನ ಒಂದಷ್ಟು ಚಹರೆಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದೆ.

ಮಾರಿಗೆ ದಾರಿ ಪಕ್ಕಾ ಮಾಸ್‌ ಕಂಟೆಂಟ್‌ ಹೊಂದಿರುವ ಚಿತ್ರವಾಗಿ ಮೂಡಿಬರುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಚಿತ್ರವನ್ನು ಅಗಸ್ತ್ಯ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.

ರಾಧಾ ಫಿಲಂಸ್‌ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಅಗಸ್ತ್ಯ ಮಹಾಲಕ್ಷ್ಮೀ, ಕಾಕ್ರೋಚ್‌ ಸುಧಿ, ವರ್ಧನ್‌, ಪ್ರದೀಪ್‌ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ತಯಾರಾಗಿದೆ.

ಜಗದೀಶ್‌ ಗೌಡ ಛಾಯಾಗ್ರಹಣ, ಸ್ವಾಮಿನಾಥನ್‌ ಆರ್‌.ಕೆ ಸಂಗೀತ ನಿರ್ದೇಶನ, ಜಗದೀಶ್‌ ಗೌಡ ಸಂಕಲನ ಈ ಚಿತ್ರಕ್ಕಿದೆ.

RELATED ARTICLES
- Advertisment -
Google search engine

Most Popular