ಪಾಂಡವಪುರ : ವಿವಾಹಿತ ಮಹಿಳೆಯೊಬ್ಬರು ತಮ್ಮ ತಾಯಿ ಮನೆಯಲ್ಲಿ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ.
ಹರಳಹಳ್ಳಿ ಗ್ರಾಮದ ಮೀಸೆ ಚನ್ನಯ್ಯ ಎಂಬವರ ಮಗಳಾದ ೩೦ ವರ್ಷದ ಅರುಣ ಕುಮಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಗೆ ಮೈಸೂರು ತಾಲ್ಲೂಕು ಹಿನ್‌ಕಲ್ ಗ್ರಾಮದ ಚಲುವರಾಜು ಎಂಬವರೊಂದಿಗೆ ವಿವಾಹವಾಗಿತ್ತು. ಇವರಿಗೆ ಸೌಜನ್ಯ ಮತ್ತು ಸಂತೋಷ್ ಎಂಬ ಇಬ್ಬರು ಮಕ್ಕಳಿದ್ದರು. ಇದರಲ್ಲಿ ಸೌಜನ್ಯ ಮೂಕಿಯಾಗಿದ್ದಳು.
ಮೃತ ಅರುಣ ಕುಮಾರಿ ಕೆಲವು ದಿನಗಳಿಂದ ಹರಳಹಳ್ಳಿ ಗ್ರಾಮದಲ್ಲಿರುವ ತಮ್ಮ ತಾಯಿಯ ಮನೆಯಲ್ಲಿ ವಾಸವಿದ್ದರು. ಸೋಮವಾರ ಗಂಡನ ಮನೆಗೆ ಹೋಗಿ ವಾಪಸ್ ಬಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಆಕೆಯ ಶವವನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.