Sunday, April 20, 2025
Google search engine

Homeರಾಜ್ಯಸುದ್ದಿಜಾಲತಾಲ್ಲೂಕು ವಕೀಲರ ಸಂಘದ ವತಿಯಿoದ ರಾಮನಗರ ಪೊಲೀಸರ ವಿರುದ್ದ ಸಾಮೂಹಿಕ ಪ್ರತಿಭಟನೆ

ತಾಲ್ಲೂಕು ವಕೀಲರ ಸಂಘದ ವತಿಯಿoದ ರಾಮನಗರ ಪೊಲೀಸರ ವಿರುದ್ದ ಸಾಮೂಹಿಕ ಪ್ರತಿಭಟನೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ರಾಮನಗರ ಜಿಲ್ಲಾ ವಕೀಲರ ಸಂಘದ ೪೦ ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಯುವ ವಕೀಲ ಹೆಚ್.ಕೆ.ಹರೀಶ್ ಹಾಗೂ ನೂರಕ್ಕೂ ಹೆಚ್ಚು ವಕೀಲರು ಪ್ರತಿಭಟನೆ ನಡೆಸಿದರು.

ಪಟ್ಟಣದ ನ್ಯಾಯಲಯದ ಮುಂಭಾಗದಲ್ಲಿ ಸಾಮೂಹಿಕ ಪ್ರತಿಭಟನೆಯನ್ನು ಹಮ್ಮಿಕೊಂಡು ಮಾತನಾಡಿದ ಅವರು ರಾಮನಗರದಲ್ಲಿ ನಡೆದಿರುವಂತಹ ಘಟನೆ ವಕೀಲರ ಮೇಲೆ ಉದ್ದೇಶ ಪೂರಕವಾಗಿ ಎಫ್.ಐ.ಆರ್ ದಾಖಲಿಸಿಕೊಂಡು ಕಿರುಕುಳ ನೀಡಬೇಕು ಎಂದು ಒಂದು ವರ್ಗದಾಸೆಯಂತೆ ಸತ್ಯ ಸತ್ಯತೆಯನ್ನು ಪರೀಶಿಲಿಸದೆ ಅಕ್ಷಮ್ಯ ಅಪರಾದವಾಗಿದೆ ಎಂದು ಖಂಡಿಸಿದರು.

ವಕೀಲರ ಮೇಲೆ ದೂರು ದಾಖಲು ಮಾಡುವ ಸಂಧರ್ಭದಲ್ಲಿ ಪೊಲೀಸರು ಸರಿಯಾಗಿ ತನಿಖೆ ಮಾಡದೇ ಪ್ರಕರಣ ದಾಖಲು ಮಾಡಿರುವುದು ನ್ಯಾಯಕ್ಕೆ ಅಪಮಾನ ಮಾಡಿದಂತಗಿದೆ ಇದರಿಂದ ಕೊಡಲೇ ಸಂಬoದ ಪಟ್ಟಂತ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ಮಾಡಿಸಿ ಪ್ರಕರಣಕ್ಕೆ ಕಾರಣ ಕರ್ತರದವರನ್ನ ಪೊಲೀಸರ ಮೇಲೆ ಸಿಸ್ತು ಕ್ರಮ ಜರುಗಿಸಿ ಹಾಗೂ ವಕೀಲರ ಮೇಲೆ ದಾಖಲಿಸಿರು ಪ್ರಕರಣವನ್ನ ಕೊಡಲೆ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ವಕೀಲರ ಸಂಘದಿoದ ಈ ಘಟನೆಗೆ ಸಂಬoದಿಸಿದ ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಮಂಜುನಾಥ್, ತಿಪ್ಪೂರು ತಿಮ್ಮೇಗೌಡ ಮಾತನಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಈ ಪ್ರತಿಭಟನೆಯಲ್ಲಿ ಚಂದ್ರಮೌಳಿ, ಎಸ್.ಎನ್.ನಾಗರಾಜ್, ದುರ್ಗೇಶ್, ಲಕ್ಷ್ಮಣ್, ದೀಲಿಪ್ ಮದುವನಹಳ್ಳಿ, ಸುನೀಲ್, ದರ್ಶನ್, ಕೆ.ಸಿ.ಹರೀಶ್, ಪ್ರದೀಪ್ ಕೃಷ್ಣೇಗೌಡ, ಜಗದೀಶ್, ಅರುಣ್, ರಾಮಚಂದ್ರ ರಾವ್, ಉದಯ್, ಶ್ರೀನಿವಾಸ್, ಪ್ರಭಾವತಿ, ಕುಮಾರಿ, ಸ್ವಪ್ನ, ಸಾ.ಕ.ಮಹೇಶ್, ದೊಡ್ಡಸ್ವಾಮಿ, ಡಿ.ಆರ್.ರಮೇಶ್, ವಿಶ್ವನಾಥ್, ವಿಜಯ ಕುಮಾರ್, ಮಲ್ಲೇಶ್, ಅಶ್ವಿನ್, ಬಸವರಾಜು, ಸಾಗರ್, ಪೂರ್ಣಿಮ, ಸಿ.ಕೆ.ಮಂಜುನಾಥ್, ಬಿ,ಜಿ.ಲೋಕೇಶ್, ಗಂಗಾಧರ್, ಅಕ್ಷಯ್ ಸೇರಿದಂತೆ ಭಾಗವಹಿಸಿದರು.

RELATED ARTICLES
- Advertisment -
Google search engine

Most Popular