Monday, April 21, 2025
Google search engine

HomeUncategorizedರಾಷ್ಟ್ರೀಯಜಗನ್ ಗೆ ಭಾರಿ ಹಿನ್ನಡೆ; ಚಂದ್ರಬಾಬು ನಾಯ್ಡು ಅವರ ಟಿಡಿಪಿಯ ಪ್ರಬಲ ಪ್ರದರ್ಶನ

ಜಗನ್ ಗೆ ಭಾರಿ ಹಿನ್ನಡೆ; ಚಂದ್ರಬಾಬು ನಾಯ್ಡು ಅವರ ಟಿಡಿಪಿಯ ಪ್ರಬಲ ಪ್ರದರ್ಶನ

ಅಮರಾವತಿ : ಆಂಧ್ರಪ್ರದೇಶ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು ಚಂದ್ರಬಾಬು ನಾಯ್ಡು ಅವರ ಟಿಡಿಪಿಯ ಪ್ರಬಲ ಪ್ರದರ್ಶನವನ್ನು ತೋರಿಸಿದೆ.

ಸಿಎಂ ಮತ್ತು ವೈಎಸ್‌ ಆರ್‌ ಸಿ ನಾಯಕ ಜಗನ್ ಮೋಹನ್ ರೆಡ್ಡಿ ಅವರಿಗೆ ಮತದಾರು ಶಾಕ್ ನೀಡಿರುವ ಲಕ್ಷಣ ಕಂಡು ಬಂದಿದೆ. ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್ , ಕಾಂಗ್ರೆಸ್ ನೇತೃತ್ವದ ಇಂಡಿಯಾ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ (ಜೆಎಸ್‌ಪಿ) ಒಳಗೊಂಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

ಆರಂಭಿಕ ಟ್ರೆಂಡ್ ನಲ್ಲಿ ಟಿಡಿಪಿ ನೇತೃತ್ವದ ಮೈತ್ರಿಯಿಂದ ಭಾರೀ ಮುನ್ನಡೆ ಸಾಧಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟ 175 ಸ್ಥಾನಗಳಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ವೈಎಸ್‌ಆರ್‌ಸಿಪಿ ಇಲ್ಲಿಯವರೆಗೆ 11 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಲೋಕಸಭೆಯ 25 ಸ್ಥಾನಗಳ ಪೈಕಿ 14ರಲ್ಲಿ ಟಿಡಿಪಿ-ಜೆಎಸ್‌ಪಿ-ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದರೆ, ವೈಎಸ್‌ಆರ್‌ಸಿಪಿ 3 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಎಕ್ಸಿಟ್ ಪೋಲ್ ಪ್ರಕಾರ, ಎನ್‌ಡಿಎ ಮೈತ್ರಿಕೂಟವು ಆಂಧ್ರಪ್ರದೇಶ ಲೋಕಸಭೆ ಚುನಾವಣೆಯಲ್ಲಿ 25 ರಲ್ಲಿ 19-25 ಸ್ಥಾನಗಳನ್ನು ಗೆಲ್ಲುವ ಭವಿಷ್ಯ ನುಡಿದಿದೆ. ವೈಎಸ್‌ಆರ್‌ಸಿಪಿ ಕೇವಲ 8 ಸ್ಥಾನಗಳನ್ನು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ.

ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 10, ಜನಸೇನಾ ಪಕ್ಷ ಮತ್ತು ಬಿಜೆಪಿ ಕ್ರಮವಾಗಿ 2 ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

RELATED ARTICLES
- Advertisment -
Google search engine

Most Popular