Monday, June 8, 2026
Google search engine

Homeರಾಜ್ಯಸುದ್ದಿಜಾಲಮಾಸ್ತಿ ಕನ್ನಡದ ಆಸ್ತಿ; ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತು: ಸುರೇಶ್ ಋಗ್ವೇದಿ

ಮಾಸ್ತಿ ಕನ್ನಡದ ಆಸ್ತಿ; ಸಾಹಿತ್ಯ ಲೋಕದ ಅಮೂಲ್ಯ ಸಂಪತ್ತು: ಸುರೇಶ್ ಋಗ್ವೇದಿ

ಚಾಮರಾಜನಗರ: ಕನ್ನಡ ಸಾಹಿತ್ಯ ಪರಂಪರೆಗೆ ಬಹುದೊಡ್ಡ ಶಕ್ತಿ ನೀಡಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಮಾಸ್ತಿ ಎಂದರೆ ಕನ್ನಡದ ಆಸ್ತಿ. ಮಾಸ್ತಿ ಎಂದರೆ ಕನ್ನಡದ ಸಂಪತ್ತು.ಮಾಸ್ತಿ ಎಂದರೆ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಗರದ ಆದಿಶಕ್ತಿ ದೇವಸ್ಥಾನದ ಬಳಿ ಇರುವ ಪುರಾತನ ಪುಟ್ಟಮ್ಮಣ್ಣಿ ಉದ್ಯಾನವನದ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಖಾದ್ರಿ ಶಾಮಣ್ಣ ರವರ ಕೊಡುಗೆಗಳ ಕುರಿತು ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ 123ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು.

ಕನ್ನಡದ ಪ್ರಸಿದ್ಧ ಸಾಹಿತಿಗಳಿಗೆ, ಲೇಖಕರಿಗೆ, ಕವಿಗಳಿಗೆ ಆದರ್ಶಪ್ರಾಯರಾದವರು. ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾಹಿತ್ಯವನ್ನು ಅಪ್ಪಿಕೊಂಡ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಳ ವ್ಯಕ್ತಿತ್ವದವರು. ಆಡಳಿತದಲ್ಲಿ ಅತ್ಯಂತ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದ ಮಾಸ್ತಿ ರವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ ಸೇವಾಸಕ್ತ ಬಿರುದನ್ನು ನೀಡಿ ಗೌರವಿಸಿರುವುದೇ ಸಾಕ್ಷಿ. ಮಾಸ್ತಿಯವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯಲಾಗಿದೆ ಸಣ್ಣ ಕಥೆಗಳನ್ನು ಹೇಳುವ ಮಾಸ್ತಿಯವರ ಶೈಲಿ ಅತ್ಯದ್ಭುತ ಕಾದಂಬರಿ ನಾಟಕ ವಿಮರ್ಶೆ ಪ್ರಬಂಧ ಧಾರ್ಮಿಕ ಕೃತಿಗಳು ಅನುವಾದ ಸಂಪಾದ್ ಸಂಪಾದಕೀಯ ಲೇಖನಗಳು ಕವಿತೆಗಳ ಸಂಗ್ರಹವನ್ನು ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವ್ಯಕ್ತಿ ಎಂದು ತಿಳಿಸಿದರು.
ಖಾದ್ರಿ ಶಾಮಣ್ಣನವರು ಪತ್ರಿಕೋದ್ಯಮದಲ್ಲಿ ವಿಶೇಷ ಪ್ರತಿಭಾನ್ವಿತರು ಸ್ವಾತಂತ್ರ್ಯ ಸಮಾನತೆ ಗಾಂಧೀಜಿ ಚಿಂತನೆ ಸರ್ವೋದಯ ತತ್ವ ಅಳವಡಿಸಿಕೊಂಡ ಶಾಮಣ್ಣನವರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಹೋರಾಟ ರೂಪಿಸಿದ ವ್ಯಕ್ತಿ ಪತ್ರಿಕೋದ್ಯಮದಲ್ಲಿ ಹಲವಾರು ಪತ್ರಿಕೆಗಳ ಲೇಖಕರಾಗಿ ಸಂಪಾದಕರಾಗಿ ಸೇವೆ ಸಲ್ಲಿಸಿ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ತಂದುಕೊಟ್ಟವರು. ಇವರ ಸಂಪಾದಕೀಯ ಲೇಖನಗಳು ನೇರ,ಹಾಗೂ ಪಾಂಡಿತ್ಯಪೂರ್ಣ ಭಾಷಾಶೈಲಿಯಲ್ಲಿತ್ತು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ರವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಉದ್ಘಾಟಿಸಿದರು. ಕನ್ನಡ ಕಥೆ, ಕವನ,ಕಾದಂಬರಿ ರಚನೆ ಮಾಡಿದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ ಜ್ಞಾನಪೀಠ ಪ್ರಶಸ್ತಿಯನ್ನು ಧರಿಸಿಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಕನ್ನಡದ ಬಹುಮುಖ ಸಾಹಿತಿ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದ 31 ವಾರ್ಡ್ ಗಳಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ತಿಂಗಳು ಇತಿಹಾಸ ಪ್ರಸಿದ್ಧ ಪುಟ್ಟ ಮ್ಮಣ್ಣಿ ಉದ್ಯಾನವನ ಹಾಗೂ ಮಂಟಪದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ರೂಪಿಸಲು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಋಗ್ವೇದಿ ತಿಳಿಸಿದರು.

ಜನಪದ ಗಾಯಕ ರವಿಚಂದ್ರಪ್ರಸಾದ್ ಕಹಳೆ ಹಾಗೂ ಶಿವಲಿಂಗ ಮೂರ್ತಿ ರವರು ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್, ಬಿಕೆ ಆರಾಧ್ಯ, ಮಂಜುಳಾ, ನಾಗವೇಣಿ, ಪುಷ್ಪಲತಾ, ರಾಜೇಶ್, ಮಹೇಶ್, ಪ್ರಸಾದ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular