ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಹೆಚ್ಚಿಸಲು ಗಣಿತ ಕಲಿಕಾ ಆಂದೋಲನದಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಗಣಿತವೆಂಬುದು ಕಬ್ಬಿಣದ ಕಡಲೆ ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ತೊಡೆದು ಹಾಕಬೇಕು” ಎಂದು ಭುವನಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ರವರು ಹೇಳಿದರು.
ಭುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಡಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಗೀತಾರವರು “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸ್ಪರ್ಧಾ ಮನೋಭಾವವನ್ನು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ರೂಡಿಸಿಕೊಳ್ಳಬೇಕು. ಹಾಗಾಗಿ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಲು ಗಣಿತ ಕಲಿಕಾ ಆಂದೋಲನದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ” ಎಂದು ಹೇಳಿದರು.
ನಾಲ್ಕನೇ ತರಗತಿ ವಿಭಾಗದಲ್ಲಿ ಜೋಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಪ್ರಿಯ ಬಿ ಎಸ್ ಪ್ರಥಮ ಸ್ಥಾನ, ಬೆಕ್ಕರೆ ಹಿರಿಯ ಪ್ರಾಥಮಿಕ ಶಾಲೆಯ ಮನ್ವಿತ್ ದ್ವಿತೀಯ ಸ್ಥಾನ ಹಾಗೂ ವಂದನಾ ಕೆ ಎಸ್ ತೃತೀಯ ಸ್ಥಾನವನ್ನು ಪಡೆದರು.
5ನೇ ತರಗತಿ ವಿಭಾಗದಲ್ಲಿ ಬೆಕ್ಕರೆ ಹಿರಿಯ ಪ್ರಾಥಮಿಕ ಶಾಲೆಯ ವರ್ಷಿತ ಪ್ರಥಮ ಸ್ಥಾನ, ಜೋಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಪುನೀತ್ ದ್ವಿತೀಯ ಸ್ಥಾನ ಹಾಗೂ ಕೃತಿಕ ತೃತೀಯ ಸ್ಥಾನವನ್ನು ಪಡೆದರು.
ಆರನೇ ತರಗತಿ ವಿಭಾಗದಲ್ಲಿ ಬೆಕ್ಕರೆ ಹಿರಿಯ ಪ್ರಾಥಮಿಕ ಶಾಲೆಯ ಸುಜನ್ ಪ್ರಥಮ ಸ್ಥಾನ, ವೇದಾವತಿ ದ್ವಿತೀಯ ಸ್ಥಾನ ಹಾಗೂ ಮೋನಿಕ ತೃತೀಯ ಸ್ಥಾನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವರಾಜು, ಪಿಡಿಓ ಪರಮೇಶ್, ಮುಖ್ಯ ಶಿಕ್ಷಕರಾದ ರಜಿನಿ, ಸಹ ಶಿಕ್ಷಕರಾದ ಮೂರ್ತಿ, ಯೋಗೇಶ್, ರಘು, ಧರ್ಮ, ಕವಿತಾ, ಸಂತೋಷ್ ಮಂಜುಳಾ, ಲಕ್ಷ್ಮಿ ಮತ್ತಿತರರು ಹಾಜರಿದ್ದರು.