ಹುಣಸೂರು: ನಾಡಿನೆಲ್ಲಡೆ ಅಕ್ಷರ,ಆರೋಗ್ಯ, ದಾಸೋಹದ ಮೂಲಕ ಹಲವು ಮಠಗಳು ತಾಯಿಯಂತೆ ಸದೃಯಿಯಾಗಿ ಕೆಲಸಮಾಡುತ್ತಿರುವುದು ಹೆಮ್ಮೆಯ ವಿಷಯವೆಂದು ಕೇಂದ್ರದ ಕೈಗಾರಿಕ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಗಾವಡಗೆರೆ ಗುರುಲಿಂಗ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ನಟರಾಜ ಸ್ವಾಮಿಗಳ 50 ನೇ ವರ್ಷದ ಚರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನಲ್ಲಿ ಉತ್ತಮ ಬದುಕಿನ ಸಹಬಾಳ್ವೆಗೆ ತಾಳ್ಮೆ, ಸಹನೆ, ಸಂಸ್ಕೃತಿಗೆ ಒತ್ತು ನೀಡುತ್ತಿರುವ ಮಠಗಳು ಸಮಾಜದ ಆರ್ಥಿಕ ಭದ್ರತೆಗೆ ಕೊಂಡಿಯಾಗಿವೆ ಎಂದರು.
ನಮ್ಮ ಸನಾತನ ಧರ್ಮದ ಉಳಿವಿನಲ್ಲಿ ಮಾನ್ಯ ಮಠಗಳ ಪಾತ್ರ ದೊಡ್ಡದಿದ್ದು, ನಮ್ಮ ದೇಶದ ಸಂಸ್ಕೃತಿ, ಪ್ರೀತಿ, ವಿಶ್ವಾಸ, ಬೆಳಸುವ ನಿಟ್ಟಿನಲ್ಲಿ ನಮ್ಮ ಸುತ್ತಲಿನ ಮಠಗಳು , ಜ್ನಾನವನ್ನು ಪಸರಿಸಿ ಉತ್ತಮ ಪ್ರಜೆಗಳ ನೀಡುವಿಕೆಯಲ್ಲಿ ಮುಂದಿದ್ದು, ಮಠಗಳು ಜನತೆಗೆ ಆಶ್ರಯವಾಗಿ ನಿಂತಿವೆ ಎಂದರೆ ಉಪ್ರೇಕ್ಷೆಯಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್ ಗೌಡ, ಸಾವಿರ ಮಕ್ಕಳ ವಿದ್ಯಾವ್ಯಾಸ, ಅನ್ನ ಅಕ್ಷರ ನೀಡಿ, ತಾಲೂಕಿಗೆ ಮಾದರಿಯಾಗಿ. ಐದು ದಶಕಗಳ ಕಾಲ ಸುಧೀರ್ಗ ಅಳಿಲು ಸೇವೇ ಮಾಡುತ್ತಿರುವ ಶ್ರೀ ನಟರಾಜ ಸ್ವಾಮಿಗಳ ಸೇವೆ ಅನನ್ಯವೆಂದರು.
ಗುರುಲಿಂಗ ಮಠದ ಶ್ರೀ ನಟರಾಜ ಸ್ವಾಮಿ 50.ನೇ ವರ್ಷದ ಚರ ಪಟ್ಟಾಧಿಕಾರ ಸ್ವೀಕರಿಸಿ. ಮಾತನಾಡಿದ ಅವರು, ಶ್ರೀ ಮಠದ ಮೇಲೆ ಭಕ್ತರು , ಜನಪ್ರತಿನಿಧಿಗಳು , ಹಾಗೂ ಸರ್ವ ಧರ್ಮದ ಮಠಾಧಿಪತಿಗಳು. ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವದೇಶಿಕೇಂದ್ರ ಸ್ವಾಮಿ,ತುಮಕೂರು ಮಠದ ಸಿದ್ದಲಿಂಗಸ್ವಾಮಿ, ಬೇಬಿ ಮಠದ ಸ್ವಾಮಿ, ಮಾಜಿ ಸಚಿವ ಹೆಚ್.ವಿಶ್ವನಾಥ್, ಮಾಜಿ ಶಾಸಕ ಕೆ.ಮಹದೇವ್, ಉದ್ಯಮಿ ಹರವೆ ಶ್ರೀಧರ್ , ಶಿವಕುಮಾರ್, ಜಗದೀಶ್, ಶಿವಣ್ಷ, ಹಾಗೂ ಮಠದ ವ್ಯವಸ್ಥಾಪಕಿ ಶಿಲ್ಪ ಮಂಜನಾಥ್ , ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ಇದ್ದರು.