Monday, February 16, 2026
Google search engine

Homeರಾಜ್ಯಸುದ್ದಿಜಾಲದೇಶ ಕಾಯುವ ಯೋಧರಿಗೆ ಸಮಾಜ ಸದಾ ಋಣಿಯಾಗಿರಲಿ-ಸುರೇಶ್ ಎನ್ ಋಗ್ವೇದಿ

ದೇಶ ಕಾಯುವ ಯೋಧರಿಗೆ ಸಮಾಜ ಸದಾ ಋಣಿಯಾಗಿರಲಿ-ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಭಾರತೀಯ ಯೋಧರಿಗೆ ಇಡೀ ಭಾರತೀಯ ಸಮಾಜ ಸದಾ ಕಾಲ ಋಣಿಯಾಗಬೇಕು. ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಬಲಿದಾನ ಮಾಡುವ ಮೂಲಕ ದೇಶದ ರಕ್ಷಣೆಗೆ ಸದಾ ಕಾಲ ಸಿದ್ದವಾಗಿರುವ ಯೋಧರು ಹಾಗೂ ಅವರ ಕುಟುಂಬಗಳಿಗೆ ಭಾರತೀಯರು ಸದಾ ಕಾಲ ಗೌರವ ನೀಡಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಪ್ರತಿಷ್ಠಾನ ನಗರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಪುಲ್ವಾಮಾ ದಾಳಿ. ವೀರ ಯೋಧರಿಗೆ ವೀರ ನಮನ ಕಾರ್ಯಕ್ರಮದಲ್ಲಿ ಪುಲ್ವಾಮ ದಾಳಿ ಫೆಬ್ರವರಿ 14 ಭಾರತೀಯರಿಗೆ ಕರಾಳ ದಿನ . ದೇಶ ಸೇವೆಯಲ್ಲಿ ತೊಡಗಿದ್ದ ಸೈನಿಕರ ಮೇಲೆ ದುಷ್ಟ ಭಯೋತ್ಪಾದಕರು ದಾಳಿ ಮಾಡಿ ನಲವತ್ತು ಭಾರತೀಯ.ಸೈನಿಕರನ್ನು ಕೊಂದ ದಿನ. ಅತ್ಯಂತ ಕರಾಳವಾಗಿದೆ. ಭಯೋತ್ಪಾದನೆಯ ವಿರುದ್ಧ ಭಾರತ ಸದೃಢ ಕಾರ್ಯ ಯೋಚನೆಯನ್ನು ರೂಪಿಸುತ್ತಿರುವುದು ಹೆಮ್ಮೆಯ ಸಂಗತಿ . ಇಡೀ ದೇಶದ ಪ್ರತಿಯೊಬ್ಬ ಪ್ರಜೆಯು ಭಾರತ ಸರ್ಕಾರಕ್ಕೆ ತಮ್ಮ ನಿಷ್ಠೆಯನ್ನು ಹಾಗೂ ಬೆಂಬಲವನ್ನು ನೀಡಬೇಕು. ದೇಶದ ಗಡಿಯಲ್ಲಿ ನಿರಂತರವಾಗಿ ಭಾರತವನ್ನು ಸಂರಕ್ಷಿಸುತ್ತಿರುವ ಭಾರತೀಯ ಯೋಧರಿಗೆ ನಮ್ಮೆಲ್ಲರ ನಮನವನ್ನು ಸಲ್ಲಿಸೋಣ . ಇಡೀ ಜಗತ್ತಿನಲ್ಲಿ ವ್ಯವಸ್ಥಿತ ಹಾಗೂ ಶಿಸ್ತುಬದ್ಧ ಸೇನಾ ವ್ಯವಸ್ಥೆ ರೂಪಿಸುತ್ತಿರುವ ಭಾರತ ಸರ್ಕಾರಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.

ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ವಿ. ಶ್ರೀಮತಿ ರವರು ಮೇಣದಬತ್ತಿ ಬೆಳಗಿಸುವ ಮೂಲಕ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು. ವೀರ ಬಲಿದಾನ ಗೊಂಡ ಯೋಧರ ಕುಟುಂಬಗಳಿಗೆ ಭಗವಂತ ದುಃಖವನ್ನು ತಡೆಯುವ ಶಕ್ತಿಯನ್ನು ಕರುಣಿಸಲಿ . ಸೈನಿಕ ವ್ಯವಸ್ಥೆಗೆ ನಮ್ಮೆಲ್ಲರ ಸಹಾಯ ಸದಾ ಇರಬೇಕು ಎಂದರು.

ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವೀರ ಯೋಧರಿಗೆ ನಮನವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ , ಗುಂಡ್ಲುಪೇಟೆ ರಮೇಶ್ , ಕಾರ್ತಿಕ್ ಸಾನಿಕ ,ಶ್ರಾವ್ಯ , ಶರಣ್ಯ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular