Friday, April 18, 2025
Google search engine

Homeರಾಜ್ಯಕದ್ರಿ ಮಲ್ಲಿಕಟ್ಟೆ ಮಾರ್ಕೆಟ್‌ ಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭೇಟಿ: ಪರಿಶೀಲನೆ

ಕದ್ರಿ ಮಲ್ಲಿಕಟ್ಟೆ ಮಾರ್ಕೆಟ್‌ ಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭೇಟಿ: ಪರಿಶೀಲನೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಮಾರ್ಕೆಟ್‌ ಗೆ ಶುಕ್ರವಾರ ಭೇಟಿ ನೀಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರಲ್ಲದೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಇತ್ತೀಚೆಗೆ ಪಾಲಿಕೆ ಸಭೆಯಲ್ಲಿ ಈ ಮಾರ್ಕೆಟ್ ಕಾಮಗಾರಿ ಕುರಿತು ಸಮಸ್ಯೆಗಳ ಬಗ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಬಂದು ಪರಿಶೀಲನೆ ನಡೆಸಿದ್ದೇನೆ. ಬೇಸ್‌ಮೆಂಟ್‌ನಲ್ಲಿ ನೀರು ನಿಲ್ಲುವ ಸಮಸ್ಯೆ ಇತ್ತು ಅದಕ್ಕೆ ಪಂಪ್ ಮೂಲಕ ನೀರು ಹೊರ ಹಾಕುವ ವ್ಯವಸ್ಥೆ ಮಾಡಿಸಲು ಸೂಚಿಸಿದ್ದೇನೆ. ಇಲ್ಲಿರುವ ಮಳಿಗೆಗಳನ್ನು ವ್ಯಾಪಾರಸ್ತರಿಗೆ ನೀಡಲು, ಸಿಗದೆ ಇದ್ದರೆ ಚೀಟಿ ಎತ್ತುವ ಮೂಲಕ ವ್ಯಾಪಾರಸ್ಥರಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು. ೨ ಮಹಡಿಗಳ ಕಾಮಗಾರಿ ಶೀಘ್ರವೇ ಮುಗಿಯಲಿದ್ದು ಲೋಕಾರ್ಪಣೆಗೊಳ್ಳಲಿದೆ. ೧೦ ಕೋಟಿ ವೆಚ್ಚದ ೯೪,೭೦೦ ಚದರ ಅಡಿ ವಿಸ್ತೀರ್ಣದ ಮಾರುಕಟ್ಟೆ ಇದಾಗಲಿದೆ ಎಂದು ವಿವರ ಒದಗಿಸಿದರು.

ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಡಿಸಿಆರ್ ಅಧಿಕಾರಿ ರೇಖಾ ಶೆಟ್ಟಿ, ಕಂದಾಯ ಅಧಿಕಾರಿ ದೇವೇಂದ್ರಪ್ಪ, ಪಾಲಿಕೆ ಅಧಿಕಾರಿಗಳಾದ ಶಿವಲಿಂಗಪ್ಪ, ಮಹೇಶ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular