Friday, April 11, 2025
Google search engine

Homeರಾಜ್ಯಎಂಸಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು: ಶಾಸಕ ಕೆ.ಎಂ.ಉದಯ್

ಎಂಸಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು: ಶಾಸಕ ಕೆ.ಎಂ.ಉದಯ್

ಮದ್ದೂರು: ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಪಟ್ಟಣದ ಪೇಟೆಬೀದಿಯ (ಎಂಸಿ ರಸ್ತೆ) ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.

ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಉಪ ವಿಭಾಗಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೇಟೆ ಬೀದಿ ಅಗಲೀಕರಣ ಸಂಬಂಧ ಪುರಸಭೆ ಸದ್ಯರಾದ ಎಂ.ಬಿ.ಸಚಿನ್, ಪ್ರಸನ್ನಕುಮಾರ್  ಸೇರಿದಂತೆ ಹಲವು ಸದಸ್ಯರು ಪ್ರಸ್ತಾಪ ಮಾಡಿದರು. ಇದಕ್ಕೆ ಪಕ್ಷತೀತವಾಗಿ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿದರು.

ಪಟ್ಟಣದ ಪೇಟೆಬೀದಿ ಈ ಹಿಂದೆ ವ್ಯಾಪಾರ ವಹಿವಾಟು ಜನಸಂಖ್ಯೆ, ವಾಹನಗಳು ಸೇರಿದಂತೆ ಇತ್ಯಾದಿ ಅಂಶಗಳ ಆಧಾರದ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಜನಸಂಖ್ಯೆ ವ್ಯಾಪಾರ ವಹಿವಾಟು ಅಭಿವೃದ್ಧಿ ಜತೆಗೆ ವಾಹನಗಳ ಸಂಚಾರವು ಹೆಚ್ಚಳವಾಗಿದೆ ಹೀಗಾಗಿ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ ಹೀಗಾಗಿ ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಈ ಕೂಡಲೇ ಪೇಟೆಬೀದಿಯ ರಸ್ತೆಯ ಅಗಲೀಕರಣ ಕೈಗೊಂಡು 100 ರಿಂದ 120 ಅಡಿಗೆ ವಿಸ್ತರಣೆ ಮಾಡುವ ಮೂಲಕ ಪಟ್ಟಣವನ್ನು ಅಭಿವೃದ್ಧಿಪಡಿಸಬೇಕು ಎಂದು ಸದಸ್ಯರುಗಳು ಆಗ್ರಹ ಮಾಡಿದರು.

ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡ  ಮಾತನಾಡಿ, ಪೇಟೆಬಿದಿಯ ಅಗಲೀಕರಣ ವೇಳೆ ಎಸ್.ಬಿ.ಎಂ.ರಸ್ತೆಯ ಮೂಲಕ ಮೈಸೂರು ಬೆಂಗಳೂರು  ಸಂಪರ್ಕ ರಸ್ತೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ರಸ್ತೆಯಿಂದ ಸರ್ವೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡ  ಅಗಲೀಕರಣ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಈ ಸಂಬಂಧ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಸಾರ್ವಜನಿಕರ ದೃಷ್ಠಿಯಿಂದ ಪೇಟೆಬೀದಿಯ ರಸ್ತೆ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಅಗಲೀಕರಣ ಸಂಬಂಧ ಈಗಾಗಲೇ 100 ಕೋಟಿ ರೂ ಅನುದಾನ ಕೋರಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಹಿಂದೆ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು ಲೋಕಸಭಾ ಚುನಾವಣಾ ಹಿನ್ನಲೆಯೆಲ್ಲಿ ನೀತಿ ಸಂಹಿತೆ ಜಾರಿಗೊಂಡ ಕಾರಣ ಅಗಲೀಕರಣ ಕಾರ್ಯ ವಿಳಂಬವಾಗಿದೆ. ಪೇಟೆಬೀದಿ ರಸ್ತೆಯನ್ನು 100 ಅಥವಾ 120 ಅಡಿಗೆ ವಿಸ್ತರಣಾ ಮಾಡಬಹುದ ಎಂಬುವುದನ್ನು ಮತ್ತೊಮ್ಮ ಚರ್ಚಿಸಿ ಶೀಘ್ರವಾಗಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಸಭೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪಕ್ಷಾತೀತವಾಗಿ ಸದಸ್ಯರುಗಳು ಶಾಸಕರು ಹಾಗೂ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಪುರಸಭಾ ವ್ಯಾಪ್ತಿಯ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಜುಲೈ 20 ರಂದು ವಿಶೇಷ  ಸಭೆ ನಡೆಸಿ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ ಸಭೆಗೆ ಸ್ಪಷ್ಟನೆ ನೀಡಿದ ಕುಡಿಯುವ ನೀರು ಮತ್ತು ಒಳಚರಂಡಿ ಎಇಇ ನಧಾಫ್ ಮಾತನಾಡಿ, ಪಟ್ಟಣಕ್ಕೆ   ಮೀಸಲಾಗಿರುವ ಕಾವೇರಿ ನೀರು ಮಳವಳ್ಳಿ ಬಾಚಹಳ್ಳಿಯಿಂದ ಪಟ್ಟಣಕ್ಕೆ ಹರಿಯುವ ಸಂದರ್ಭದಲ್ಲಿ ಸುಮಾರು ಹಲವಾರು ಹಳ್ಳಿಗಳಿಗೆ ಕುಡಿಯುವ ನೀರು ಹರಿಯುತ್ತಿದೆ. ಆದ್ದರಿಂದ ಪಟ್ಟಣಕ್ಕೆ 24/7 ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ.ಉದಯ್ ಅವರು, ಪಟ್ಟಣಕ್ಕೆ ಮೀಸಲಿರುವ ನೀರನ್ನು ಪಟ್ಟಣಕ್ಕೆ ಹರಿಸಿದರೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಹಳ್ಳಿಗಳಿಗೆ ಹೋಗುತ್ತಿರುವ ನೀರನ್ನು ನಿಲ್ಲಿಸಿ. ಆ ಹಳ್ಳಿಗಳಿಗೆ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ  ಪುರಸಭೆಗೆ ಸೇರಿದ ನಿವೇಶಗಳನ್ನು  ಸರ್ವೆ ಮಾಡಿ ಗುರುತಿಸಿ ನಾಮಫಲಕಗಳನ್ನು ಹಾಕಬೇಕು. ಸಾರ್ವಜನಿಕರು ಅಥವಾ ಪ್ರಭಾವಿಗಳು ಪುರಸಭಾ ಸ್ಥಳವನ್ನು  ಒತ್ತುವರಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪುರಸಭೆಯ ನೀರು ಸರಬಾಜು ವಿಭಾಗಕ್ಕೆ  ಸಬ್ ಮಸ್ರಿಬಲ್ಪಂಪ್ ಪಂಪ್ಸೆಟ್  ನಿರ್ವಹಣೆಗೆ, ಒಳಚರಂಡಿ ನಿರ್ವಹಣೆ ಮತ್ತು ದುರಸ್ತಿ, ಪುರಸಭಾ ವ್ಯಾಪ್ತಿಯಲ್ಲಿ 1 ರಿಂದ 23 ವಾರ್ಡ್ಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಜತೆಗೆ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಆತಗೂರು ಹೋಬಳಿ ಹೂತಗೆರೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿರುವ ಕೋಟ್ಯಂತರ ರೂ, ಬೆಲೆ ಬಾಳುವ 5 ಗುಂಟೆ  ಗ್ರಾಮ ಠಾಣಾ ನಿವೇಶ ಮತ್ತು ಹೊಂಬಾಳಮ್ಮ ದೇವಸ್ಥಾನಕ್ಕೆ ಸೇರಿದ 1 ಗುಂಟೆ ನಿವೇಶನ ಸೇರಿದಂತೆ ಒಟ್ಟು 6 ಗುಂಟೆ ನಿವೇಶವನ್ನು ಪುರಸಭೆಯ ಹಿಂದಿನ ಅಧಿಕಾರಿಗಳು 3.500 ರೂ. ಕಂದಾಯ ಕಟ್ಟಿಸಿಕೊಂಡು ಪ್ರಭಾವಿಗಳಿಗೆ ಅಕ್ರಮವಾಗಿ ಇ ಸ್ವತ್ತು ಮಾಡಿಸಿಕೊಂಡಿದ್ದಾರೆ ಎಂದು ಪುರಸಭಾ ಸದಸ್ಯ ಸಚಿನ್ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ಸಚಿನ್ ಆರೋಪಕ್ಕೆ ಉತ್ತರ ನೀಡಿದ ಉಪ ವಿಭಾಗಧಿಕಾರಿ ಶಿವಮೂರ್ತಿ, ಈ ಸಂಬಂಧ ಪರಿಶೀಲನೆ ಮಾಡಿ ಒಂದು ವೇಳೆ  ಅಕ್ರಮ ಖಾತೆ ಮಾಡಿದ್ದರೆ ತಪ್ಪಿತಸ್ಥ ಅಧಿಕಾರಿಗಳು ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಸದಸ್ಯರಾದ ಎಸ್.ಮಹೇಶ್, ಎಂ.ಐ.ಪ್ರವೀಣ್, ಕೋಕಿಲ, ವನಿತಾ, ಪ್ರಮೀಳ, ಆದಿಲ್ ಆಲಿ ಆಖನ್, ಮನೋಜ್, ಸರ್ವಮಂಗಳ ಸೇರಿದಂತೆ, ಪುರಸಭೆಯ ಕಂದಾಯ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular