ಮಂಗಳೂರಿನ ಹೆಮ್ಮೆಯ ಗುರುತಾದ ಎಂಸಿಎಫ್ ಹೆಸರನ್ನು ತೆಗೆದು ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಎಂದು ನಾಮಫಲಕವನ್ನು ಈ ಹಿಂದೆ ಹಾಕಲಾಗಿತ್ತು . ಈ ಬಗ್ಗೆ ವಿರೋಧಿಸಿದ ಮೇಲೆ ಮತ್ತೊಮ್ಮೆ ಎಂಸಿಎಫ್ ಹೆಸರನ್ನು ನಾಮಫಲಕಕ್ಕೆ ಸೇರ್ಪಡೆ ಮಾಡಲಾಯಿತ್ತು ಇದು ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ತಿಳಿಸಿದರು.
ಅವರು ಮನಪಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎಂಸಿಎಫ್ ಹೆಸರನ್ನು ಕೂಡಲೇ ನಾಮಫಲಕ್ಕೆ ಮರುಸ್ಥಾಪಿಸುವಂತೆ ಪಾರಾದೀಪ್ ಫಾಸ್ಟೇಟ್ಸ್ ಲಿಮಿಟಿಡ್ ಆಡಳಿತ ಮಂಡಳಿಗೆ ಆಗ್ರಹಿಸಲಾಗಿತ್ತು ತಪ್ಪಿದಲ್ಲಿ ಉಗ್ರ ಹೋರಾಟ ಆರಂಭಿಸಿ ವಿಧಾನ ಮಂಡಲದಲ್ಲಿಯೂ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಎಚ್ಚರಿಕ್ಕೆಯನ್ನು ನೀಡಿದೆ . ಅಷ್ಟಲ್ಲದೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ನೇರವಾಗಿ ಸಂಸ್ಥೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚೆಯನ್ನು ಮಾಡಲಾಗಿತ್ತು . ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಆಡಳಿತ ಮಂಡಳಿ ಎಚೆತ್ತು ಎಂಸಿಎಫ್ ಹೆಸರನ್ನು ಮರುಸ್ಥಾಪಿಸಲು ತಾತ್ವಿಕ ಸಮ್ಮತಿ ನೀಡಿತು. ಇದೀಗ ನಾಮಫಲಕ ಮರುಸ್ಥಾಪನೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್ , ಶಶಿಧರ್ ಹೆಗ್ಡೆ , ಸುರೇಶ್ ಪಿಕೆ , ಪಿ ಕೆ ಹರೀಶ್, ಎಂಸಿಎಫ್ ಮಾಜಿ ಉದ್ಯೋಗಿಗಳು ಸಹಿತ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



