ರಾಮನಗರ: ರಾಮನಗರಕ್ಕೆ ಮಂಜೂರು ಆಗಿರುವ ಮೆಡಿಕಲ್ ಕಾಲೇಜನ್ನು ತಪ್ಪಿಸುವುದು ಬೇಡ ಯಥಾಸ್ಥಿತಿಯಲ್ಲೇ ಇದನ್ನು ಇಲ್ಲೇ ಮುಂದುವರಿಸಬೇಕು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಮನಗರಕ್ಕೆ ಒಂದು ಪ್ರತ್ಯೇಕ ಕಾಲೇಜು ತರಬೇಕು ಎಂದು ಈಗಾಗಲೇ ಮಂತ್ರಿಗಳು ಹೇಳಿದ್ದಾರೆ. ರಾಮನಗರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಕನಕಪುರಕ್ಕೆ ಹೋಗೊಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಕನಕಪುರಕ್ಕೆ ಪ್ರತ್ಯೇಕ ಮೆಡಿಕಲ್ ಕಾಲೇಜು ತರ್ತಾರೆ ಅನ್ನೋ ನಂಬಿಕೆ ಇದೆ ಎಂದರು.
ಈಗಾಗಲೇ ಈ ವಿಚಾರವಾಗಿ ಡಿಸಿಎಂ ಬಳಿ ಹೇಳಿಕೊಂಡಿದ್ದೇನೆ. ಡಿಸಿಎಂ ಮೇಲೆ ನಮ್ಮ ಜನರು ನಂಬಿಕೆ ಇಟ್ಟಿದ್ದಾರೆ. ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜು ರಾಮನಗರದಲ್ಲೇ ಇರುತ್ತದೆ. ಸರ್ಕಾರ ನಮ್ಮದೇ ಇದೆ. ಈ ಬಗ್ಗೆ ಹೋರಾಟ ಯಾಕೆ ಮಾಡಬೇಕು. ಮುಂದಿನ ವರ್ಷ ಬೇಕಿದ್ರೆ ಬಜೆಟ್ ನಲ್ಲಿ ಕೊಡ್ತಾರೆ. ಶಿಫ್ಟ್ ಆಗಿದೆ ಅನ್ನೋ ವಿಚಾರ ಕೇಲವ ಊಹಾಪೋಹ. ಆದಷ್ಟು ಬೇಗ ಯಥಾಸ್ಥಿತಿ ಏನಿದೆ ಅದನ್ನು ಕಾಪಾಡಬೇಕು ಅನ್ನೋದೆ ನನ್ನ ಅಭಿಪ್ರಾಯ. ನಾನು ನಮ್ಮ ಕ್ಷೇತ್ರದ ಜನರ ಪರವಾಗಿ ನಿಲ್ಲುತ್ತೇನೆ. ನನ್ನ ನಿಲುವನ್ನ ಬದಲಾಯಿಸಿಕೊಳ್ಳಲ್ಲ ಎಂದರು.