ವರದಿ :ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮದಲ್ಲಿ ನಡೆದ ನಾಡಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ಗೈರಾದ ಸಾಲಿಗ್ರಾಮ ಗ್ರಾ.ಪಂ ಪಿಡಿಒ ವಿರುದ್ಧ ಗ್ರಾ.ಪಂ.ಸದಸ್ಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.
ಸರ್ಕಾರಿ ಅದೇಶ ಇದ್ದರು ಕೂಡ ಸಾಲಿಗ್ರಾಮ ಗ್ರಾಂ ಪಂ ನವರು ನಾಡ ಧ್ವಜ ಅನಾವರಣ ಮಾಡದ ಬಗ್ಗೆ ಗ್ರಾಂ ಪಂ ಸದಸ್ಯರು ಮತ್ತು ಸಾರ್ವಜನಿಕರು ಗ್ರಾ.ಪಂ. ಸಿಬ್ಬಂದಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು ನಂತರ ಧ್ವಜ ತಂದು ಕಟ್ಟಿದ ಪ್ರಸಂಗ ನಡೆಯಿತು 69ನೇ ಕನ್ನಡ ರಾಜ್ಯೋತ್ಸವವನ್ನು ಇಡೀ ರಾಜ್ಯದಲ್ಲೇ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ವಿವಿಧ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕರೆದು ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದರು ಆದರೆ ಇಂದು ಗ್ರಾಂ ಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾಲಿಗ್ರಾಮ ಗ್ರಾಂ ಪಂ ಅಲ್ಲಿ ರಾಜ್ಯೋತ್ಸವ ಆಚರಣೆ ಬಗ್ಗೆ ತೀರ್ವ ಆಕ್ರೋಶ ವ್ಯಕ್ತಪಡಿಸಿದ ಗ್ರಾ.ಪಂ.ಸದಸ್ಯರು ಸಾರ್ವಜನಿಕರು ಕೂಡಲೇ ಮೇಲಾಧಿಕಾರಿಗಳು ನಿರ್ಲಕ್ಷ್ಯ ಧೋರಣೆ ವಹಿಸಿರುವ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಂ ಪಂ ಅಧ್ಯಕ್ಷೆ ಫಾತಿಮಾ ಉನ್ನೀಸ್, ಉಪಾಧ್ಯಕ್ಷೆ ಶಶಿಕಲಾ ಶಿವರಾಜ್, ಸದಸ್ಯರಾದ ಎಸ್. ಆರ್. ಪ್ರಕಾಶ್, ಹರೀಶ್, ಶಕೀಲ್ ,ಮಾಜಿ ಉಪಾಧ್ಯಕ್ಷ ಶಿವಣ್ಣ, ಮಾಜಿ ಸದಸ್ಯರಾದ ಬಲರಾಮೇಗೌಡ, ಆಯಾಜ್ ಅಹಮದ್ ,ಲೆಕ್ಕ ಸಹಾಯಕ ರವಿ, ಸ್ವಾಮಿ, ಸಿಬ್ಬಂದಿ ಅಕ್ಷಯ್ ಮುರುಗೇಶ್ ,ವಸಂತ್ ಸೇರಿದಂತೆ ಮತ್ತಿತರರು ಹಾಜರಿದ್ದರು