Sunday, April 20, 2025
Google search engine

Homeರಾಜ್ಯಸುದ್ದಿಜಾಲವಿಶ್ವಕರ್ಮ ಸಮುದಾಯದವರು ತಮ್ಮ ಕುಲ ಕಸುಬುಗಳಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ: ಶಾಸಕ ಡಿ.ರವಿಶಂಕರ್

ವಿಶ್ವಕರ್ಮ ಸಮುದಾಯದವರು ತಮ್ಮ ಕುಲ ಕಸುಬುಗಳಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ವಿಶ್ವಕರ್ಮ ಸಮುದಾಯದವರು ತಮ್ಮ ಕುಲ ಕಸುಬುಗಳಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹಾ ಸಮಾಜಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಜಯಂತಿ ಆಚರಣೆ ಜಾರಿಗೆ ತಂದು, ನಿಗಮ
ಮಂಡಳಿ ಸ್ಥಾಪನೆ ಮಾಡಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಮಾಜವನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು
ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಮಾಜದವರು ಹೆಚ್ಚು ಮಂದಿ ಅಧಿಕಾರಿಗಳಾದಾಗ ಅವರುಗಳಿಂದ ಸಮಾಜದ ಅಭಿವೃದ್ದಿಗೆ ಅನುಕೂಲವಾಗಲಿದೆ ಇದನ್ನು ಅರಿತು
ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದ ಶಾಸಕರು ಹಿಂದುಳಿದ ಸಮುದಾಯಗಳು
ಅಭಿವೃದ್ದಿಗೊಳ್ಳಲು ಶಿಕ್ಷಣ ಪ್ರಮುಖವಾಗಿದೆ ಇದನ್ನು ಸಮುದಾಯದವರು ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.
ಕೆ.ಆರ್.ನಗರದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಮಾಡಲು ಸಿಎ ನಿವೇಶನ ಕೊಡಿಸಿ ಭವನ ನಿರ್ಮಾಣಕ್ಕೆ ಅನುದಾನ ನೀಡುವುದರ ಜತೆಗೆ ಭವನದ ಉದ್ಘಾಟನೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕ
ಡಿ.ರವಿಶಂಕರ್ ಸಮಾಜದ ಮುಖಂಡರಿಗೆ ರಾಜಕೀಯ ಅಧಿಕಾರ ನೀಡುವುದರ ಜತೆಗೆ ಸರ್ಕಾರದ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಕೆ.ಎಸ್.ರೇವಣ್ಣ, ಸಮಾಜದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಪುರಸಭೆ ಮಾಜಿ ಸದಸ್ಯ ಕೆ.ಬಿ.ಸುಬ್ರಮಣ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತ್ತಲ್ಲದೆ ಮರಗೆಲಸ ಮತ್ತು ಚಿನ್ನಬೆಳ್ಳಿ ಕೆಲಸ ಮಾಡುವ ಸಮಾಜದ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಹೆಬ್ಬಾಳು ಹೋಬಳಿ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಲೋಕೇಶ್‌ಭರಣಿ, ಸಮಾಜದ ಮುಖಂಡರಾದ ವೀರಭದ್ರಾಚಾರಿ, ಎಸ್.ಆರ್.ಯೋಗೇಶ್, ನಟಶೇಖರಾಚಾರ್, ದಿನೇಶ್, ಸಿ.ವಿ.ಮೋಹನ್‌ಕುಮಾರ್, ಕ್ಷೇತ್ರಪಾಲ್, ಅರುಣ್‌ಕುಮಾರ್, ಚಂದ್ರಚಾರ್,
ತೇಜುಮೂರ್ತಿ, ರಾಮಚಾರಿ, ಪುಟ್ಟಣ್ಣಾಚಾರ್, ರೇಣುಕಾಪ್ರಸನ್ನ, ಪುಟ್ಟಸ್ವಾಮಾಚಾರ್, ನಾಗೇಶ್, ಲಕ್ಷಿ?ಮಶ್, ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ತಾ.ಪಂ. ಮಾಜಿ ಸದಸ್ಯರಾದ ಎ.ಟಿ.ಗೋವಿಂದೇಗೌಡ, ಎಲ್.ಎಂ.ಸಣ್ಣಪ್ಪ, ಪುರಸಭೆ ಸದಸ್ಯ ಶಂಕರ್, ಮಾಜಿ ಸದಸ್ಯ ಕೆ.ವಿನಯ್, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಾಜದ ಮುಖಂಡರುಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular