Sunday, April 20, 2025
Google search engine

HomeUncategorizedರಾಷ್ಟ್ರೀಯಮುಟ್ಟು ಎಂಬುದು ಅಂಗವೈಕಲ್ಯವಲ್ಲ, ಹೆಣ್ಣುಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ: ಸ್ಮೃತಿ ಇರಾನಿ ವಿರೋಧ

ಮುಟ್ಟು ಎಂಬುದು ಅಂಗವೈಕಲ್ಯವಲ್ಲ, ಹೆಣ್ಣುಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ: ಸ್ಮೃತಿ ಇರಾನಿ ವಿರೋಧ

ಹೊಸದಿಲ್ಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ಅವರು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆಯರಿಗೆ ಮುಟ್ಟು ಎನ್ನುವುದು ಜೀವನದ ನೈಸರ್ಗಿಕ ಭಾಗವಾಗಿದ್ದು, ಅದನ್ನು ವಿಶೇಷ ರಜೆ ನಿಬಂಧನೆಗಳ ಅಗತ್ಯವಿರುವ ಅಂಗವಿಕಲತೆ ಎಂದು ಪರಿಗಣಿಸಬಾರದು ಎಂದಿದ್ದಾರೆ.

 “ಋತುಸ್ರಾವದ ಮಹಿಳೆಯಾಗಿ, ಋತುಚಕ್ರವು ಅಂಗವಿಕಲತೆ ಅಲ್ಲ, ಇದು ಮಹಿಳೆಯರ ಜೀವನ ಪ್ರಯಾಣದ ನೈಸರ್ಗಿಕ ಭಾಗವಾಗಿದೆ” ಎಂದು ಇರಾನಿ ಹೇಳಿದರು.

ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ ಅವರು, “ಋತುಸ್ರಾವವಾಗದ ಯಾರಾದರೂ ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಸಮಸ್ಯೆಗಳನ್ನು ನಾವು ಪ್ರಸ್ತಾಪಿಸಬಾರದು.” ಎಂದರು.

ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರಡು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು.

RELATED ARTICLES
- Advertisment -
Google search engine

Most Popular