ಜೆ.ಎಸ್.ಎಸ್. ಸಂಸ್ಥೆಯ ದೃಷ್ಟಿ ದೋಷವುಳ್ಳ ಮಹಿಳೆಯರು ಹಾಗೂ ವಿದ್ಯಾರ್ಥಿನಿ ನಿಲಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್ ಸಂಸ್ಥೆಯವರ ದೃಷ್ಟಿ ದೋಷವುಳ್ಳ ಮಹಿಳೆಯರು ಹಾಗೂ ವಿದ್ಯಾರ್ಥಿನಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯ ದರ್ಶನ್ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಕೆ.ವಿ.ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು ಕೋವಿಡ್ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮಾನಸಿಕ ಒತ್ತಡ, ಆತಂಕ ಅನಾರೋಗ್ಯಕ್ಕೆ ಕಾರಣ, ನಮ್ಮಲ್ಲಿ ನಾನು ಎಂಬ ಭಾವನೆ ಹೆಚ್ಚಾಗುತ್ತಿದ್ದು ದುಃಖ ಮತ್ತು ನೋವುಗಳಿಗೆ ಕಾರಣವಾಗುತ್ತಿದೆ, ಪ್ರಸ್ತುತ ಸಾರ್ವಜನಿಕರಲ್ಲಿ ಸಂಯಮ ಸಮಾಧಾನ ಗಣನೀಯವಾಗಿ ಕಡಿಮೆಯಾಗುತ್ತಿದೆ, ಅನಗತ್ಯವಾಗಿ ಕೋಪಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಕೆ.ವಿ.ಕೆ. ಫೌಂಡೇಶನ್ ಅಧ್ಯಕ್ಷ ಖುಷಿ ವಿನು,ದುರ್ಗಾ ಫೌಂಡೇಶನ್ ಅಧ್ಯಕ್ಷ ರೇಖಾ ಶ್ರೀನಿವಾಸ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಛಾಯಾಗ್ರಾಹಕ ಯಶ್ವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಭವ್ಯ, ಸುಬ್ರಮಣಿ ,ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ರಾಜು, ರಾಕೇಶ್, ಕೀರ್ತನ,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಇತರರು ಹಾಜರಿದ್ದರು.