Friday, April 11, 2025
Google search engine

Homeರಾಜ್ಯಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂ ಗೆ ತಾಳಿ ಪೋಸ್ಟ್ ಮಾಡಿ ಮಾಂಗಲ್ಯ ಭಾಗ್ಯ ಉಳಿಸಿಕೊಡಿ ಮಹಿಳೆ...

ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂ ಗೆ ತಾಳಿ ಪೋಸ್ಟ್ ಮಾಡಿ ಮಾಂಗಲ್ಯ ಭಾಗ್ಯ ಉಳಿಸಿಕೊಡಿ ಮಹಿಳೆ ಮನವಿ

ಹಾವೇರಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು, ಈಗಾಗಲೇ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಹಿಳೆಯೊಬ್ಬರು ನನ್ನ ಮಾಂಗಲ್ಯ ಭಾಗ್ಯ ಉಳಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಾಳಿ ಪೋಸ್ಟ್ ಮಾಡಿ ಮನವಿ ಮಾಡಿರುವ ಘಟನೆ ವರದಿಯಾಗಿದೆ.

ಹಾವೇರಿ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ ಅವರ ಉಪಟಳ ಹೆಚ್ಚುತ್ತಿದೆ. ಫೈನಾನ್ಸ್ ಕಿರುಕುಳಕ್ಕೆ ರಾಣೆಬೆನ್ನೂರು ಪಟ್ಟಣದ ನಿವಾಸಿ ಶೈಲಾ ಬೇಸತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಶೈಲಾ ಪತಿ ಮನೆ ತೊರೆದಿದ್ದಾರೆ. ಈ ವೇಳೆ ಶೈಲಾ ಸಿಎಂ ಗೆ ತಾಳಿ ಪೋಸ್ಟ್ ಮಾಡಿ ನನ್ನ ಮಾಂಗಲ್ಯ ಭಾಗ್ಯ ಉಳಿಸಿಕೊಡಿ ಎಂದು ಶೈಲಾ ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಮಾಂಗಲ್ಯದ ಬದಲಾಗಿ ಅರಿಶಿನ ಕೊಂಬು ಕಟ್ಟಿಕೊಂಡು ಶೀಲಾ ಇದೀಗ ಜೀವನ ನಡೆಸುತ್ತಿದ್ದಾರೆ. ವಿಕಲಚೇತನ ಪುತ್ರನ ಜೊತೆಗೆ ಶೈಲಾ ಇದೀಗ ಜೀವನ ನಡೆಸುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ದಬ್ಬಾಳಿಕೆಗೆ ಕಡಿವಾಣ ಹಾಕಲು ಶೈಲಾ ಒತ್ತಾಯಿಸಿದ್ದಾರೆ. ನಿನ್ನೆ ಸಹ ರಾಯಚೂರಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟಿದ್ದ ವ್ಯಕ್ತಿಯ ಪತ್ನಿಯೊಬ್ಬರು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮಾಂಗಲ್ಯ ಸರ ಪೋಸ್ಟ್ ಮಾಡಿ ಮನವಿ ಮಾಡಿದ್ದರು.

RELATED ARTICLES
- Advertisment -
Google search engine

Most Popular