ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಹಯಾತುಲ್ ಇಸ್ಲಾಂ ಮದ್ರಸ ಕುದ್ಲೂರು, ಮುಬಾರಕ್ ಜುಮಾ ಮಸೀದಿ ಕುದ್ಲೂರು ಆತೂರು ನೇತೃತ್ವದಲ್ಲಿ ಹಾಗೂ ಎಸ್ ಕೆ ಎಸ್ ಬಿವಿ, ಎಸ್ ಕೆ ಎಸ್ ಎಸ್ ಎಫ್ ಸಹಯೋಗದಲ್ಲಿ ಮಿಲಾದ್ ಫೆಸ್ಟ್ ಕಲಾ ಕಾರ್ಯಕ್ರಮ ಮಸೀದಿ ಆವರಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಕೆ.ವೈ.ಇಸ್ಮಾಯಿಲ್ ವಹಿಸಿದ್ದರು. ಖತೀಬ್ ಮುಹಮ್ಮದ್ ಮುನೀರ್ ಯಮಾನಿ ಪ್ರಾರ್ಥನೆಗೈದರು. ನಝೀರ್ ಮುಸ್ಲಿಯಾರ್ ಅಲ್ ಮದನಿ ಸ್ವಾಗತ ಭಾಷಣ ಮಾಡಿದರು. ಮದ್ರಸಾ ಅಧ್ಯಾಪಕ ಜಿಕೆ ಅಬೂಬಕ್ಕರ್ ಮದನಿ ಗಡಿಯಾರ್ ಉದ್ಘಾಟನಾ ನೆರವೇರಿಸಿದರು.
ಖತೀಬ್ ಮುನೀರ್ ಯಮಾನಿ ಕಲಾರ ಮುಖ್ಯ ಭಾಷಣ ಮಾಡಿದರು. ಮಸೀದಿಯ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಮರ್ವೇಲ್ ಭಾಷಣ ಮಾಡಿದರು. ಮುಹಮ್ಮದ್ ನವಾಝ್ ಯಮಾನಿ ಕಿರಾಅತ್ ಪಠಿಸಿದರು. ಇದೇ ವೇಳೆ ಮಕ್ಕಳ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಸರ್ಟೀಫಿಕೇಟ್ ವಿತರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಅಹ್ಮದ್ ಕುಂಞ ಹಾಜಿ, ಕೋಶಾಧಿಕಾರಿ ಅಬ್ದುಲ್ ಖಾದರ್, ಸುಲೈಮಾನ್, ಇಬ್ರಾಹಿಂ ಸಾಹೇಬ್, ಕೆ.ಕೆ.ಅಬ್ದುಲ್ ಖಾದರ್ ಮರ್ವೇಲ್, ಅಬ್ದುಲ್ ರಝಾಕ್, ಮುಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು. ಇದೇ ವೇಳೆ ಈದ್ ಮೀಲಾದ್ ಪ್ರಯುಕ್ತ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ, ಮೀಲಾದ್ ಮೆರವಣಿಗೆ ಕಾರ್ಯಕ್ರಮ ಕೂಡಾ ನಡೆಯಿತು.
