Sunday, April 20, 2025
Google search engine

Homeಸ್ಥಳೀಯಹಾಲು ಉತ್ಪಾದಕ ಸಹಕಾರ ಸಂಘ : ಜೆಡಿಎಸ್ ಬೆಂಬಲಿತರ ಗೆಲುವು

ಹಾಲು ಉತ್ಪಾದಕ ಸಹಕಾರ ಸಂಘ : ಜೆಡಿಎಸ್ ಬೆಂಬಲಿತರ ಗೆಲುವು


ಹೊಸೂರು : ಸಾಲಿಗ್ರಾಮ ತಾಲೂಕಿನ ಬಂಡಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಆಡಳಿತ ಮಂಡಳಿಯ ೧೧ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೧ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ.
೨೦೨೩-೨೦೨೮ ಸಾಲಿಗೆ ನಡೆದ ಈ ಚುನಾವಣೆಯಲ್ಲಿ ನಿಗದಿಯಾಗಿದ್ದ ಬೆಳಿಗ್ಗೆ ೧೦ರಿಂದ ೩ರ ವರಗೆ ನಡೆದ ಚುನಾವಣೆಯಲ್ಲಿ ಸಂಘದ ಸುಮಾರು ೧೨೦ ಮತದಾರರಲ್ಲಿ ೧೦೯ ಮಂದಿ ಮತದಾರರು ಹಕ್ಕು ಚಲಾಯಿಸಿದರು ನಂತರ ಚುನಾವಣಾಧಿಕಾರಿಯಾಗಿದ್ದ ಕೆ.ಆರ್.ನಗರ ಸಹಕಾರ ಇಲಾಖೆಯ ಅಧಿಕಾರಿ ರವಿ ಅವರು ಫಲಿತಾಂಶವನ್ನು ಪ್ರಕಟಿಸಿದರು
ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಬಿ.ಎಲ್.ಲೋಕೇಶ್(೬೫), ಗಿರಿಗೌಡ(೬೩), ಸತೀಶ(೬೩),ವಸಂತಕುಮಾರ(೫೩),ನಾಗರಾಜು(೫೧),ರಾಮೇಗೌಡ(೫೧)ಮಲ್ಲಯ್ಯ(೪೯),ಅನುಸೂಯ(೫೮),ಜ್ಯೋತಿ(೫೧) ಮತಗಳನ್ನು ಪಡೆದು ಆಯ್ಕೆಯಾದರು
ಇನ್ನು ಎರಡು ಸ್ಥಾನಗಳಿಗೆ ಸ್ಪರ್ದಿಸಿದ್ದ ಕಾಂತರಾಜು,ಶಿವಣ್ಣೇಗೌಡ ಅವರುಗಳು ಅವಿರೋದವಾಗಿ ಆಯ್ಕೆಯಾಗಿದ್ದಾರೆ
ಇನ್ನು ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ದಿಸಿದ್ದ ಗಿರೀಶ(೪೨),ಬಿ.ಟಿ.ಗೋಪಾಲ(೩೯),ನಂದೀಶ(೪೨),ಪ್ರಕಾಶ(೪೧), ಬಿ.ಟಿ.ಬಸವರಾಜ(೪೬), ಬಿ.ಆರ್.ಸತೀಶ(೩೬)ಹಲಗೇಗೌಡ(೪೬)ಸತ್ಯವತಿ(೩೮)ಮತಗಳನ್ನು ಪಡೆದು ಪರಾಭವ ಗೊಂಡರು
ಫಲಿತಾಂಶ ಪ್ರಕಟಿಸುತ್ತಿದ್ದಂತಯೇ ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ್ , ಗ್ರಾ.ಪಂ.ಸದಸ್ಯ ಅಶ್ವತ್ ಕುಮಾರ್,ಶೀಲಾ, ಮುಖಂಡರಾದ ಬಿ.ಇ.ರಮೇಶ್, ಬಿ.ಎಚ್.ರುದ್ರೇಗೌಡ,ಸೋಮಶೇಖರ, ರವೇಶ್ ಭಾವ,ಗಂಗಾಧರ್,ರಂಜಿತ್,ಆದಿತ್ಯ, ಸ್ವಾಮಿ,ನಾಗೇಗೌಡ,ಮೈಲಾರಿ,ಬಿ.ಆರ್.ರುದ್ರೇಗೌಡ,ರಾಜೇಗೌಡ,ರಂಗಸ್ವಾಮಿ,ಮಹೇಂದ್ರ ಮತ್ತಿತರು ನೂತನ ನಿರ್ದೇಶಕರನ್ನು ಅಭಿನಂದಿಸಿ ವಿಜಿಯೋತ್ಸವ ಆಚರಿಸಿದರು

ಚಿತ್ರ ಶಿರ್ಷಿಕೆ : ಸಾಲಿಗ್ರಾಮ ತಾಲೂಕಿನ ಬಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತರನ್ನು ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ್ ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular