ಈಚೂರು ಡೈರಿ ವಾರ್ಷಿಕ ಸಭೆ
ಬೆಟ್ಟದಪುರ: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಸೇರಿದಂತೆ ರಾಸುಗಳಿಗೆ ನೀಡುವ ವಿಮಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಮೈಮುಲ್ ವಿಸ್ತರಣಾಧಿಕಾರಿ ಶ್ರೀಕಾಂತ್ ಮಾಹಿತಿ ನೀಡಿದರು.
ಬೆಟ್ಟದಪುರ ಸಮೀಪದ ಈಚೂರು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರು ಒಕ್ಕೂಟವು ನೀಡುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಂಘದ ಅಭಿವೃದ್ಧಿಯಲ್ಲಿ ಪಾತ್ರವಹಿಸಬೇಕು ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಎ ಜ್ಯೋತಿ ಮಾತನಾಡಿ ಈ ಬಾರಿ ಸಂಘದಲ್ಲಿ 6 ಲಕ್ಷ ನಿವ್ವಳ ಆದಾಯ ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಗ್ರಾಮದ ಮಹಿಳೆಯರಾದ ಈರಮ್ಮ, ಹೊನ್ನಮ್ಮ, ರತ್ನಮ್ಮ, ಸೋಮಣ್ಣ, ಚಂದ್ರಮ್ಮ, ರಾಧಮ್ಮ, ಜಯಮ್ಮ,ಕಮಲಮ್ಮ, ಸಣ್ಣೇಗೌಡ, ರಾಜೇಗೌಡ, ಪಾಪಣ್ಣ, ಮಹದೇವಪ್ಪ, ಕಾಳೇಗೌಡ, ಚೇತನ್ ಕುಮಾರ್, ಸಿದ್ದಲಿಂಗಣ್ಣ, ಕಾಂತರಾಜು, ರಘು, ಮನೋಜ್, ಜ್ಯೋತಿ, ತಾಯಮ್ಮ, ಹಾಲು ಪರೀಕ್ಷೆಕ ಆರ್.ನಾರಾಯಣಸ್ವಾಮಿ, ಸಹಾಯಕ ಲಕ್ಷ್ಮಮ್ಮ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.