ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಖಾಸಗಿ ಶಾಲೆಯ ಮಿನಿ ಬಸ್ ಗೆ ರಸ್ತೆ ಕಾಮಗಾರಿ ಮಾಡುತ್ತಿರುವ ಕಂಪನಿಯ ಟ್ಯಾಂಕರ್ ಡಿಕ್ಕಿ , ಉರುಳಿ ಬಿದ್ದ ಖಾಸಗಿ ಶಾಲಾ ಮಿನಿ ಬಸ್ , ಮಿನಿ ಬಸ್ ನಲ್ಲಿದ್ದ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರು……. ಏಳು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸಾಲಿಗ್ರಾಮ ತಾಲ್ಲೂಕಿನ ಕುರುಬಹಳ್ಳಿ ಗೇಟ್ ನಲ್ಲಿ ನಡೆದಿದೆ. ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಾಗಿ ಶಾಲೆಗೆ ಸೇರಿದ ಮಿನಿ ಬಸ್ಸ್ ಎನ್ನಲಾಗಿದೆ.
ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ಘಟನೆ, ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ ಟ್ಯಾಂಕರ್ ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ತುಂಬಿಕೊಂಡು ಮಿರ್ಲೆ ಗ್ರಾಮಕ್ಕೆ ಹೋಗುತ್ತಿದ್ದ ಮಿನಿ ಬಸ್ಸ್ ಗೆ ಕುರುಬಹಳ್ಳಿ ಗೇಟ್ ಬಳಿ ಏಕಾಏಕಿ ಶಾಲಾ ಮಕ್ಕಳಿರುವ ಮಿನಿ ಬಸ್ಸ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಉರುಳಿ ಬಿದ್ದ ಮಿನಿ ಬಸ್ಸ್.

ಮಿನಿ ಬಸ್ಸ್ ನಲ್ಲಿದ್ದ 15 ಮಕ್ಕಳ ಪ್ರಾಣಾಪಾಯದಿಂದ ಪಾರಾಗಿದ್ದು ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯ, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳನ್ನು ಸ್ಥಳಿಯರು ಹಾಗೂ ಸಾಲಿಗ್ರಾಮ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣರಾಜು ರವಾನೆ ಮಾಡಿದರು. ಸದ್ಯಕ್ಕೆ ದೀಕ್ಷಾ 5 ನೇ ತರಗತಿ, ತೇಜಸ್ಸ್ 2 ನೇ ತರಗತಿ, ಸಂಗೀತಾ 6 ನೇ ತರಗತಿ ಮೂವರು ಮಕ್ಕಳನ್ನು ಕೆ.ಆರ್.ನಗರ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲುಮಾಡಲಾಗಿದ್ದು ಉಳಿದ ಮಕ್ಕಳನ್ನು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಿಂದ ಪ್ರಥಮ ಹಂತ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಈ ಸಂಬಂದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಸಕರ ಭೇಟಿ : ಖಾಸಾಗಿ ಶಾಲೆಯ ಮಿನಿ ಬಸ್ಸ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿಯಾಗಿ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಶಾಲಾ ಮಕ್ಕಳನ್ನು ಶಾಸಕ ಡಿ.ರವಿಶಂಕರ್ ಭೇಟಿ ಸಾಂತ್ವನ ಹೇಳಿದರು. ಮಕ್ಕಳ ಆರೋಗ್ಯದ ಬಗ್ಗೆ ವಿಚಾರ ಮಾಡಿ ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದರಲ್ಲದೆ ಅಫಘಾತ ನಡೆದ ಬಗ್ಗೆ ಮಾಹಿತಿ ಪಡೆದು ಕೊಂಡರು. ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನವೀನ್, ಬಿಇಓ ಆರ್.ಕೃಷ್ಣಪ್ಪ, ಇಸಿಓ ದಾಸಪ್ಪ ಇದ್ದರು.