Saturday, April 19, 2025
Google search engine

Homeರಾಜ್ಯಆ.15ರಂದು ನನ್ನ ಬದಲು ಸಚಿವೆ ಅತಿಶಿ ಧ್ವಜಾರೋಹಣ ಮಾಡಲಿದ್ದಾರೆ: ಕೇಜ್ರಿವಾಲ್ ಗವರ್ನರ್‌ಗೆ ಪತ್ರ

ಆ.15ರಂದು ನನ್ನ ಬದಲು ಸಚಿವೆ ಅತಿಶಿ ಧ್ವಜಾರೋಹಣ ಮಾಡಲಿದ್ದಾರೆ: ಕೇಜ್ರಿವಾಲ್ ಗವರ್ನರ್‌ಗೆ ಪತ್ರ

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಬದಲಿಗೆ ಸಚಿವೆ ಅತಿಶಿ ಮರ್ಲೆನಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತಳುಕು ಹಾಕಿಕೊಂಡಿರುವ ಭ್ರಷ್ಟಾಚಾರ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲುವಾಸ ಅನುಭವಿಸುತ್ತಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಷೇನಾ ಅವರಿಗೆ ಜೈಲಿನಂದಲೇ ಪತ್ರ ಬರೆದಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಬದಲಿಗೆ ಆಗಸ್ಟ್ ೧೫ರಂದು ಅತಿಶಿಯವರು ತ್ರಿವರ್ಣ ಧ್ವಜ ಹಾರಿಸುವುದಾಗಿ ತಿಳಿಸಿದ್ದಾರೆ’ ಎಂದು ಎಎಪಿ ಹೇಳಿದೆ.

ಪ್ರತಿ ವರ್ಷ ಸ್ವಾತಂತ್ರೋತ್ಸವದ ಕಾರ್ಯಕ್ರಮಗಳು ಛಾರ್‌ತ್ರಾಸಲ್ ಮೈದಾನದಲ್ಲಿ ನಡೆಯುತ್ತಿತ್ತು. ಅರವಿಂದ್ ಕೇಜ್ರಿವಾಲ್ ಸಾರ್ವಜನಿಕ ಭಾಷಣ ಮಾಡುತ್ತಿದ್ದರು. ಆದರೆ ಈ ಬಾರಿ ಕೇಜ್ರಿವಾಲ್ ಅವರು ಸೆರೆವಾಸದಲ್ಲಿದ್ದು, ಅವರ ಬದಲಿಗೆ ಅತಿಶಿಯವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

RELATED ARTICLES
- Advertisment -
Google search engine

Most Popular