ಮಂಗಳೂರು (ದಕ್ಷಿಣ ಕನ್ನಡ); ಆರೋಗ್ಯ ಇಲಾಖೆ ವತಿಯಿಂದ ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ “ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ” ಕಾರ್ಯಕ್ರಮವನ್ನು ಮಂಗಳೂರು ನಗರದ ಕೋಡಿಕಲ್ ಸೇಂಟ್ ಡೋಮಿನಿಕ್ ಚರ್ಚ್ ಹಾಲ್‍ನ ಲ್ಲಿ ಆರೋಗ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಅಲ್ಲದೇ ಸುತ್ತಮುತ್ತಲ ಪ್ರದೇಶವನ್ನು ಪರಿಶೀಲಿಸಿದರು. ಇದೇ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಎಂಎಲ್ ಸಿ ಐವನ್ ಡಿಸೋಜಾ ಸೇರಿದಂತೆ ಅನೇಕರು ಹಾಜರಿದ್ದರು.