Monday, December 2, 2024
Google search engine

Homeರಾಜ್ಯಸುದ್ದಿಜಾಲಚುಂಚನಕಟ್ಟೆ ಜಲಪಾತೋತ್ಸವಕ್ಕೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಚಾಲನೆ

ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಚಾಲನೆ

ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಕ್ಷೇತ್ರದ ಅಭಿವೃದ್ದಿಗೆ ಕಾಳಜಿ‌ ವಹಿಸಿರುವ ಶಾಸಕ ಡಿ.ರವಿಶಂಕರ್ ಅವರಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಹಾಗು ಕನ್ನಡ ಸಂಸ್ಕ್ರತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಲಪಾತೋತ್ಸವ 2024- ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಡಿ.ರವಿಶಂಕರ್ ಅವರು ಚುಂಚನಕಟ್ಟೆ ಕ್ಷೇತ್ರ ಮತ್ತು ಕೆ.ಆರ್.ನಗರ ಕ್ಷೇತ್ರದ ಅಭಿವೃದ್ದಿಗೆ ನೀಡಿರುವ ಅನುಧಾನದ ಪಟ್ಟಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಅನುಧಾನ ನೀಡಲಿದ್ದು ಇದರಿಂದ ಕ್ಷೇತ್ರದ ಅಭಿವೃದ್ದಿಗೆ ಮುನ್ನಡಿ ಬರೆಯಲಿದೆ ಎಂದರು.

ಚುಂಚನಕಟ್ಟೆ ಧಾರ್ಮಿಕವಾದ ಕ್ಷೇತ್ರ, ರಾಮಾಯಣದಲ್ಲಿ ಬರೆದಿದ್ದಾರೆ, ಪ್ರವಾಸೋದ್ಯಮ ಕ್ಷೇತ್ರ ಹಾಗೂ ಶ್ರೀಮಂತ ಕ್ಣೇತ್ರ, ಇಲ್ಲಿನ‌ ಜನರ ಸಾಂಸ್ಕೃತಿಕ ಜೀವನಕ್ಕೆ ಸಹಕಾರ ನೀಡ ಬೇಕು ಆದ್ದರಿಂದ ಜಲಪಾತೋತ್ಸವ ಅಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಗಳ ಮೂಲಕ ನಮ್ಮ ನೆಲದ ಸಂಸ್ಕ್ರತಿ ಉಳಿಯ ಬೇಕೆಂದರು. ಮುಖ್ಯ ಅತಿಥಿಯಾಗಿದ್ದ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಮಾತನಾಡಿ ಶಾಸಕ ಡಿ.ರವಿಶಂಕರ್ ಅವರು ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರಿ ಸಾಕಷ್ಟು ಅನುತಂದು ಅಭಿವೃದ್ದಿ ಕೆಲಸಗಳಿಗೆ ಒತ್ತು ನೀಡಲು ಮುಂದಾಗಿದ್ದು ಇದಕ್ಕೆ ತಾಲೂಕಿನ ಜನತೆ ಅವರಿಗೆ ಅಗತ್ಯ ಸಹಕಾರ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದ ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂ ಕುಗಳ ವ್ಯಾಪ್ತಿಯಲ್ಲಿ ಇರುವ ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆ ದ್ಯತೆ ನೀಡಲಿದ್ದು, ಜತೆಗೆ ಜನರ ಹಿತ ಕಾಯ ಲು ಬದ್ದನಾಗಿದ್ದೇನೆ ಎಂದು ತಿಳಿಸಿದರು.

ಚುಂಚನಕಟ್ಟೆ ಶ್ರೀರಾಮ ಸಹಕಾತ ಸಕ್ಕರೆ ಕಾರ್ಖಾನೆ ಜನವರಿ ತಿಂಗಳಿನಿಂದ ಆರಂಭ ವಾಗಿ ಮುಂದೆ ನಿರಂತರವಾಗಿ ಕಬ್ಬು ಅರೆಯ ಲಿದ್ದು, ನಾನು ಈ ವಿಚಾರದಲ್ಲಿ ಕಠಿಬದ್ದನಾಗಿ ಕೆಲಸ ಮಾಡಲಿದ್ದು, ಜನತೆ ನನಗೆ ನೀಡಿರುವ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮದಲ್ಲಿ ಹರೀಶ್ ಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಎಸ್.ಪಿ.ವಿಷ್ಣುವರ್ಧನ, ಎ.ಸಿ.ವಿಜಯಕುಮಾರ್
ಕಾಂಗ್ರೇಸ್ ಮುಖಂಡ ಡೊಡ್ಡಸ್ವಾಮೇಗೌಡ, ಸುನಿತಾ ರವಿಶಂಕರ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸಯ್ಯದ್ ಜಾಬೀರ್, ಕಾಂಗ್ರೇಸ್ ಮುಖಂಡಾರದ ಹೆಬ್ಬಾಳು ನಾಗೇಂದ್ರ, ಹೊಸೂರು ಡೈರಿ ಮಾದು, ಎಚ್.ಜೆ.ರಮೇಶ್, ಹೆಬ್ಬಾಳು ಸ್ವಾಮಿ, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಸವಿತಾ ಶ್ರೀನಿವಾಸ್ ,ತಾಲೂಕು‌ ಆರೋಗ್ಯಾಧಿಕಾರಿ ಡಾ.ನಟರಾಜು, ಕೃಷಿ ಇಲಾಖೆ ಎಡಿ ಮಲ್ಲಿಕಾರ್ಜುನ್,ಮೀನುಗಾರಿಕೆ ಇಲಾಖೆ ಎಡಿ ಶಿವರಂಜನ್ , ತೋಟಗಾರಿಕೆ ಇಲಾಖೆ ಎಡಿ ಭಾರತಿ, ರೇಷ್ಮೆ ಇಲಾಖೆ ಎಡಿ ಶಿವಮೂರ್ತಿ, ಸಾಮಾಜಿಕ ಅರಣ್ಯ ಇಲಾಖೆ ಆರ್.ಎಪ್.ಓ ಹರಿಪ್ರಸಾದ್ , ಆಹಾರ ಇಲಾಖೆಯ ಕುಮಾರ್, ಉಪತಹಸೀಲ್ದಾರ್ ಕೆ.ಜೆ.ಶರತ್, ಆರ್.ಐ.ಚಿದನಂದ್, ವಿಎಗಳಾದ ಮೌನೇಶ್, ಮೇಘ , ಪಿಡಿಓ ರಾಜೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಲೇಸರ್ ಲೈಟ್ ಚಿತ್ತಾರದಲ್ಲಿ ಧನುಷ್ಕೋಟಿ ಕಾವೇರಿ ಜಲಪಾತ”: ಚುಂಚನಕಟ್ಟೆಯಲ್ಲಿ ನಡೆದ ಜಲಪಾತೋತ್ಸವದಲ್ಲಿ‌ ವಿವಿಧ ಬಣ್ಣಗಳ ಲೇಸರ್ ಲೈಟ್ ನ ಬೆಳಕಿನಲ್ಲಿ ಕಾವೇರಿ ನದಿಯ ಧನುಷ್ಕೋಟಿಯ ಜಲಪಾತದ ಚಿತ್ತಾರ ನೆರದಿದ್ದ ಸಾವಿರಾರು ಮಂದಿಯ ಮನಸೂರೆ ಗೊಂಡಿತು ರಾತ್ರಿ 8 ಗಂಟೆಯ ಸಮಯದಲ್ಲಿ ಜಲಪಾತೋತ್ಸವಕ್ಕೆ ಸಚಿವ ಡಾ‌.ಎಚ್.ಸಿ.ಮಹದೇವಪ್ಪ ಚಾಲನೆ ನೀಡುತ್ತಿದ್ದಂತಯೇ ಲೇಸರ್ ಲೈಟ್ಸ್ ಕಾವೇರಿ ನದಿಯ ಧನುಷ್ಕೋಟಿ ಜಲಪಾತದ ಮೇಲೆ ಹಾದು ಹೋಗುತ್ತಿದ್ದ ವೈಭವ ಕಂಡು ಜನರು ಮೂಕ ವಿಸ್ಮಿತರಾದರು.

ಎರಡು ವರ್ಷಗಳಿಂದ ನಡೆಯದ ಈ ಕಾರ್ಯಕ್ರಮ ಈ ಬಾರಿಯು ನಡೆಯುವ ಅನುಮಾನದ ನಡುವೆಯೂ ಶಾಸಕ ಡಿ.ರವಿಶಂಕರ್ ಅವರು ಸರ್ಕಾರದ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದ ಪರಿಣಾಮವಾಗಿ ಕೊರೆಯುವ ಚಳಿಯ ನಡೆಯುವೆ‌ ಜನರು ಕಾರ್ಯಕ್ರಮಕ್ಕೆ ಆಗಮಿಸಿ ಲೈಸರ್ ಲೈಟ್ ಬೆಳಕಿನಲ್ಲಿ ಹರಿಯುವ ಜಲಪಾತವನ್ನು ನೋಡಿ ಸಂಭ್ರಮಿಸಿದರಲ್ಲದೇ ನದಿಯ ಮೇಲ್ ಭಾಗದಲ್ಲಿ ನಿಂತು ಜಲಪಾತದ ಸೆಲ್ಪಿ ಪೋಟೋಗಾಗಿ ಮುಗಿ ಬಿದ್ದರು.

ಕಾರ್ಯಕ್ರಮದ ಅಂಗವಾಗಿ ಬಸವಯ್ಯ ಮತ್ತು ತಂಡದಿಂದ ಜರುಗಿದ. ಜನಪದ ಝೇಂಕಾರ, ಕನ್ನಡ ಸಂಗೀತ ವೈಭವ, ಡಾ.ರಾಮೇಶ್ವರಪ್ಪ ತಂಡದಿಂದ ಕನ್ನಡ ಸಂಗೀತಾ ವೈಭವ ಮತ್ತು‌ ಖ್ಯಾತ ಗಾಯಕ ರಘುದೀಕ್ಷಿತ್ ತಂಡದಿಂದ ನಡೆದ ಸಂಗೀತ ಸಂಜೆ ಮತ್ತು ವಿವಿದ ಕಲಾವಿದರು ನೀಡಿದ ವೈವಿಧ್ಯ ಕಾರ್ಯಕ್ರಮಗಳು ಸಂಗೀತದ ರಸದೌತಣ ಉಣ ಬಡಿಸಿ ನೆರೆದಿದ್ದವರು ತಲೆದೂಗುವಂತೆ ಮಾಡಿದವು.

ಶಾಸಕ ಡಿ.ರವಿಶಂಕರ್ ಅವರ ಕಾಳಜಿಯಿಂದ ಜಲಪಾತೋತ್ಸವದ ಅಂಗವಾಗಿ ಚುಂಚನಕಟ್ಟೆ ಬಸವನ ವೃತ್ತವಲ್ಲದೆ ಕೆ.ಆರ್.ನಗರ ಸೇರಿದಂತೆ ಇಲ್ಲಿಗೆ ಚುಂಚನಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಎಲ್ಲಾ ಗ್ರಾಮಗಳ ಪ್ರಮುಖ ವೃತ್ತಗಳಲ್ಲಿಯೂ ದೀಪಾಲಂಕಾರ ಮಾಡಿದ್ದು ಗಮನ ಸೆಳೆಯಿತು.

” ಜನರ ಗಮನ ಸೆಳೆದ ವಸ್ತು ಪ್ರದರ್ಶನ “: ಜಲಪಾತೋತ್ಸವದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ಜನರಿಗೆ ಕೃಷಿ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಮೀನುಗಾರಿಕೆ , ಆರೋಗ್ಯ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ತೆರೆಯಲಾಗಿದ್ದ ವಸ್ತು ಪ್ರದರ್ಶನ ಜನರ ಗಮನ ಸೆಳೆಯಿತು.

ಬಾರಿ ಬಿಗಿ ಭದ್ರತೆ “: ಈ ಬಾರಿಯ ಜಲಪಾತೋತ್ಸವಕ್ಕೆ ಹತ್ತು ಸಾವಿರದಷ್ಟು ಮಂದಿ ಭಾಗವಹಿಸಿದ್ದ ಹಿನ್ನಲೆಯಲ್ಲಿ ಮುನ್ನಚ್ಚರಿಕೆಯ ಕ್ರಮವಾಗಿ ಡಿವೈಸ್ಎಪಿ ರಘು, ಸಾಲಿಗ್ರಾಮ ವೃತ್ತ ನಿರೀಕ್ಷ ಕೃಷ್ಣರಾಜು, ಕೆ.ಆರ್.ನಗರ ಠಾಣೆಯ ವೃತ್ತ ನಿರೀಕ್ಷಕ ಶಿವಪ್ರಕಾಶ್ , ಪಿಎಸ್ ಐ ಚೇತನ್, ನೇತ್ವದಲ್ಲಿ ಬಾರಿ ಬಿಗಿ ಭದ್ರತೆ ಏರ್ಪಡಿಸಿ ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.

RELATED ARTICLES
- Advertisment -
Google search engine

Most Popular