ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ
ಪಿರಿಯಾಪಟ್ಟಣ: ರೈತ ಅನೇಕ ಸಂಕಷ್ಟಗಳ ನಡುವೆ ತಂಬಾಕು ಬೆಳೆದಿದ್ದರೂ ಅತೀವೃಷ್ಠಿಗೆ ತುತ್ತಾಗಿ ಇಳುವರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು ಎಂದು ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಮಾರುಕಟ್ಟೆ ಪರಿಶೀಲನೆ ನಡೆಸಿ ಮಾತನಾಡಿದರು. ಆಂಧ್ರ ಪ್ರದೇಶದಲ್ಲಿ ಬೆಳೆಯುವ ತಂಬಾಕಿಗಿಂತ ನಮ್ಮಲ್ಲಿ ಬೆಳೆಯುವ ತಂಬಾಕು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ದೇಶ ವಿದೇಶಗಳಲ್ಲಿ ನಮ್ಮ ಭಾಗದಲ್ಲಿ ಬೆಳೆಯುವ ತಂಬಾಕಿಗೆ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ ಇಂಥ ಗುಣಮಟ್ಟದ ತಂಬಾಕು ಉತ್ಪಾದಿಸಲು ರೈತರು ಸಾಕಷ್ಟು ಕಷ್ಟಪಡುತ್ತಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಭಾಗದಲ್ಲಿ ಬೆಳೆಯುವ ತಂಬಾಕಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ತಂಬಾಕು ಮಂಡಳಿಯವರು 100 ಮಿಲಿಯನ್ ಕೆಜಿಗೂ ಅಧಿಕ ತಂಬಾಕು ಅಗತ್ಯವಿದೆ ಎಂದು ಎರಡನೆ ಅವರಿಗೂ ತಂಬಾಕನ್ನು ಬೆಳೆಯುವಂತೆ ರೈತರಲ್ಲಿ ಮೊರೆ ಇಟ್ಟ ಹಿನ್ನೆಲೆಯಲ್ಲಿ ಎರಡನೆ ಅವರಿಗೂ ತಂಬಾಕನ್ನೆ ಬೆಳೆದಿದ್ದಾನೆ ಹಾಗಾಗಿ ರೈತನ ಶ್ರಮ ವ್ಯರ್ಥವಾಗಬಾರದು ಅವನ ಶ್ರಮಕ್ಕೆ ತಕ್ಕುದಾದ ಬೆಲೆ ನೀಡುವುದು ಮಂಡಳಿಯ ಜವಾಬ್ದಾರಿ ಎಂದರು.
100 ಮಿಲಿಯನ್ ಗೂ ಅಧಿಕ ಉತ್ಪಾದನೆ: ತಾಲ್ಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 53 ಸಾವಿರಕ್ಕೂ ಹೆಚ್ಚು ರೈತರು ತಂಬಾಕು ಬೆಳೆದಿದ್ದರು. ದುರಾದೃಷ್ಟವೆಂದರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿ ಅತೀವೃಷ್ಠಿ ಸಂಭವಿಸಿ ರೈತ ಭೂಮಿಗೆ ಬಿತ್ತಿದ ಬೆಳೆ ಸರಿಯಾಗಿ ಕೈ ಸೇರದೆ ಬೆಳೆ ಕುಂಠಿತವಾಗಿದೆ, ಅಲ್ಲದೆ ತಂಬಾಕು ಮಂಡಳಿಯ ಅಧಿಕಾರಿಗಳು ಕಂಪನಿಗಳೊಂದಿಗೆ ವೈಪರೀತ್ಯದ ನಡುವೆ ತಂಬಾಕನ್ನು ಎರಡನೇ ಬೆಳೆಯಾಗಿ ಮತ್ತೆ ಬೆಳೆಯುವಂತೆ ಆಮೀಷ ಒಡ್ಡುತ್ತಿರುವುದು ರೈತರಲ್ಲಿ ಉಮ್ಮಸ್ಸು ಮೂಡಿಸಿದ್ದರೂ ಹವಮಾನ ವೈಪರೀತ್ಯ ಉಂಟಾಗಿ ರೈತ ಮತ್ತೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಆರಂಭಿಸಿದುವುದು ವಾಡಿಕೆ ಹಾಗೂ ರೈತರಿಗೆ ಹೆಚ್ಚು ಅನುಕೂಲ ಆದರೆ ತಂಬಾಕು ಮಂಡಳಿಯವರು ಒಂದು ತಿಂಗಳು ಹರಾಜು ಪ್ರಕ್ರಿಯೆಯನ್ನು ತಡವಾಗಿ ಆರಂಭಿಸಿರುವುದರಿಂದ ರೈತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲಕ್ಕೆ ಹೆಚ್ಚು ಬಡ್ಡಿ ಕಟ್ಟಬೇಕು ಇದರಿಂದ ಹರಾಜು ಪ್ರಕ್ಕರಿಯೆ ತಡವಾಗಿ ಆರಂಭಿಸಿರುವುದು ಆತನಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಆದ್ದರಿಂದ ಮಂಡಳಿಯವರು ಅತೀವೃಷ್ಠಿಯಿಂದಾಗಿರುವ ನಷ್ಟ ಹಾಗೂ ಸಮರ್ಪಕವಾದ ಬೆಲೆ ನೀಡುವ ಮೂಲಕ ಆತನ ನೆರವಿಗೆ ಧಾವಿಸಭೇಕು ಎಂದರು.
ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಶೀಲ್ದಾರ್ ನಿಸರ್ಗ ಪ್ರಿಯಾ, ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್ ರಾವ್, ಹರಾಜು ಅಧೀಕ್ಷಕರಾದ ಐಸಕ್ ವರ್ಣಿತ್, ರಾಮ್ ಮೋಹನ್ ಚೂರಿ, ಪ್ರಭಾಕರ್, ಐಟಿಸಿ ಲೀಫ್ ಮ್ಯಾನೇಜರ್ ಶ್ರೀನಿವಾಸ ರೆಡ್ಡಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಕೆ.ಹೊಲದಪ್ಪ, ಪಿ.ಮಹದೇವ್, ಹಿಟ್ನಳ್ಳಿ ಪರಮೇಶ್, ಅನಿಲ್ ಕುಮಾರ್, ಹೆಮ್ಮಿಗೆ ಮಹೇಶ್, ಸುಂಡವಾಳು ಮಹಾದೇವ್ , ಶಿವರುದ್ರ, ಕಗ್ಗುಂಡಿ ಶಿವರಾಂ, ಆಯಿತನಳ್ಳಿ ಮಹಾದೇವ್ , ಗಂಗನಕುಪ್ಪೆ ಚತುರ ಸೇರಿದಂತೆ ಹಾಜರಿದ್ದರು.