ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ದತೆ ಆರಂಭಿಸಿದ್ದು, ಅಭಿವೃದ್ಧಿಯ ಕಾರ್ಯಗಳ ಹೆಸರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸಭೆ ನಡೆಸಿದ್ದಾರೆ.
ನಾಗಮಂಗಲ ಪಟ್ಟಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಚಲುವರಾಯ ಸ್ವಾಮಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಪಕ್ಷದ ಕೈ ಹಿಡಿಯುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಯಾ ಜಿಲ್ಲಾ ಉಸ್ತುವಾರಿಗಳಿಗೆ ಹಾಗೂ ಸಚಿವರಿಗೆ ಪಕ್ಷದಿಂದ ಟಾರ್ಗೆಟ್ ಮತ್ತು ಟಾಸ್ಕ್ ನೀಡಲಾಗಿದೆ. ಪಕ್ಷದ ಹೈ ಕಮಾಂಡ್ ಸೂಚನೆಯಂತೆ ಕೆಲಸ ಮಾಡ್ತಿವಿ. ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹೆಸರು ಇನ್ನು ಅಂತಿಮವಾಗಿಲ್ಲ. ಚಂದ್ರಶೇಖರ್, ಮಧು ಮಾದೇಗೌಡ ಸೇರಿ ಐದಾರು ಹೆಸರು ಇವೆ ಆದ್ರೆ ಅಂತಿಮವಾಗಿಲ್ಲ. ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ಪಡೆ ವಿಚಾರದ ಯಾವುದೇ ಮಾತುಕತೆ ನಡೆದಿಲ್ಲ ಡಿಸೆಂಬರ್ ಒಳಗೆ ಸಭೆ ನಡೆಸಿ ಒಮ್ಮತ ಅಭ್ಯರ್ಥಿ ಹಾಕುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.