ಮಂಡ್ಯ: ಸಚಿವ ಎನ್ ಚಲುವರಾಯಸ್ವಾಮಿ ಜನತಾ ದರ್ಶನಕ್ಕೆ ಸಮಸ್ಯೆಗಳ ಮಹಾಪೂರ ಹರಿದು ಬಂದಿದ್ದು, ಅರ್ಜಿ ಹಿಡಿದು ಬಂದು ಜನರು ಸಚಿವರು ಮತ್ತು ಅಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾ ದರ್ಶನ ಸಭೆಯಲ್ಲಿ ಡಿಸಿ, ಎಸಿ, ಸಿಇಒ ಮುಂದೆ ಜನರು ಅಹವಾಲು ಸಲ್ಲಿಸಿದ್ದಾರೆ.
ಕ್ಷೇತ್ರದ ಜನರ ಸಮಸ್ಯೆ ಕೇಳಲು ಸಚಿವರ ಸಮ್ಮುಖದಲ್ಲಿ ಜನತಾ ದರ್ಶನ ಆಯೋಜಿಸಲಾಗಿದೆ.
ಕೆರಗೋಡು ಹನುಮ ಧ್ವಜ ಪ್ರಕರಣ: ಎಫ್ ಐ ಆರ್ ರದ್ದಿಗೆ ಸಚಿವರಲ್ಲಿ ಮನವಿ
ಸರ್ಕಾರ ಪೊಲೀಸರ ಮೂಲಕ ರೌಡಿ ಶೀಟರ್ ಓಪನ್ ಮಾಡಿಸಿದೆ. ನಮ್ಮ ಮೇಲಿನ ರೌಡಿ ಶೀಟರ್ ತೆರವುಗೊಳಿಸಿ ಎಂದು ಸಭೆಯಲ್ಲಿ ಮನವಿ ಮಾಡಲಾಗಿದ್ದು, ಮನವಿ ಸ್ಚೀಕರಿಸಿದ ಸಚಿವ, ಶಾಸಕರು ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ.
ಈ ಸಮಸ್ಯೆಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.. ಈ ಬಗ್ಗೆ ಪೊಲೀಸರ ವರದಿ ತರಿಸಿಕೊಂಡು ಮುಗ್ದರ ಮೇಲಿನ ರೌಡಿ ಶೀಟರ್ ಮತ್ತು ಎಫ್ ಐಆರ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ನಮ್ಮ ಸರ್ಕಾರ ಇದರಲ್ಲಿ ದ್ವೇಷದ ರಾಜಕಾರಣ ಮಾಡಲ್ಲ. ಗ್ರಾಮದಲ್ಲಿ ಎಲ್ಲರು ಸೌಹೌರ್ಧ ಬದುಕಿಗೆ ನಾವು ಶ್ರಮಿಸುತ್ತೇವೆ. ಜನತಾ ದರ್ಶನ ಸಭೆಯಲ್ಲಿ ಸಚಿವರು ಕೆರಗೋಡು ಹನುಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.