Sunday, April 20, 2025
Google search engine

Homeರಾಜ್ಯಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಲು ಸಚಿವ ಎನ್.ಎಸ್ ಬೋಸರಾಜು ಕರೆ.

ಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಲು ಸಚಿವ ಎನ್.ಎಸ್ ಬೋಸರಾಜು ಕರೆ.

ತೆಲಂಗಾಣ ವಿಧಾನ ಸಭೆ ಚುನಾವಣೆ- ಎನ್ಎಸ್ ಬೋಸರಾಜುರಿಂದ ಭರ್ಜರಿ‌ ಪ್ರಚಾರ

ತೆಲಂಗಾಣ ವಿಧಾನಸಭೆ ಚುನಾವಣೆ ನಿಮಿತ್ಯ ವನಪರ್ತಿ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೇಘಾ ರಡ್ಡಿ ಅವರ ಪರವಾಗಿ ನಡೆದ ಪ್ರಮೂಖ ಮುಖಂಡರ ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್ಎಸ್ ಬೋಸರಾಜು ಅವರು ಭಾಗವಹಿಸಿ ಚುನಾವಣೆಯ ಸಿದ್ದತೆ ಕುರಿತಯ ಸುಧೀರ್ಘ ಚರ್ಚಿಸಿದರು‌.

ಟಿಆರ್ ಎಸ್ ಪಕ್ಷ ಹಣದ ಆಮಿಷದಿಂದ ಚುನಾವಣೆ ಮಾಡುತ್ತಿದೆ.
ತೆಲಂಗಾಣದಲ್ಲಿ ಹಣ ಮತ್ತು ಸ್ವಾಭಿಮಾನದ ನಡುವೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಘಾ ರಡ್ಡಿ ಗೆಲ್ಲಿಸುವ ಮೂಲಕ ಸ್ವಾಭಿನವನ್ನು ಕಾಪಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕರ್ನೂಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಅಭೂತಪೂರ್ವವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ, ಎಐಸಿಸಿ ಕಾರ್ಯದರ್ಶಿ ಚಿನ್ನಾ ರಡ್ಡಿ, ಎಐಸಿಸಿ ಕಾರ್ಯದರ್ಶಿ ಮೋಹನ್ ರಡ್ಡಿ, ನಾಗರ ಕರ್ನೂಲ್ ಮಾಜಿ ಸಂಸದ ಮಲ್ಲು ರವಿ, ಕೆ ಶಾಂತಪ್ಪ, ಶ್ರೀಕಾಂತ ವಕೀಲ್, ಜಿ ಶಿವಮೂರ್ತಿ, ಶ್ರೀ ಲತಾ ರಡ್ಡಿ, ರಾಜೇಂದ್ರ ಪ್ರಸಾದ ಸೇರಿ ಅನೇಕರು ಉಪಸ್ಥಿತರಿದ್ದರು‌.

RELATED ARTICLES
- Advertisment -
Google search engine

Most Popular