ರಾಯಚೂರು: ಓಪೆಕ್ ಆಸ್ಪತ್ರೆ ಅವ್ಯವಸ್ಥೆ ಕುರಿತು ಡೀನ್ ಗೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ ಕೈಲಿ ಡೀನ್ ಕೆಲಸ ನಿಭಾಯಿಸೋದಕ್ಕೆ ಆಗುತ್ತೋ ಇಲ್ವೋ..? ಆಗದಿದ್ರೆ ಬಿಡಿ ಬೇರೆಯವರನ್ನ ನೇಮಿಸ್ತೇನೆ.. ಯಾಕೆ ನಾನ್ಸೆನ್ಸ್ ಥರ ಕೆಲಸಮಾಡ್ತಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಮ್ಸ್ ಆಸ್ಪತ್ರೆ ಹಾಗೂ ಓಪೆಕ್ ಗೆ ಭೇಟಿ ನೀಡಿದ ವೇಳೆ ಸಚಿವರ ಎದುರೇ ರೋಗಿಗಳು ಅಳಲು ತೋಡಿಕೊಂಡ ಹಿನ್ನಲೆಯಲ್ಲಿ ಕೋಪಗೊಂಡ ಸಚಿವರು ಸಭೆಯಲ್ಲಿ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆ ಡೀನ್ ಬಸವರಾಜ್ ಪೀರಾಪುರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸಂಜೀವಿನಿಯಂತಿರುವ ಓಪೆಕ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ಕಳಪೆ ಸೇವೆ ಒದಗಿಸಲಾಗುತ್ತಿದೆ.
ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಅಸ್ವಚ್ಛತೆ, ಚಿಕಿತ್ಸೆಗೆ ವಿಳಂಬ, ವೈದ್ಯರ ಅಲಭ್ಯತೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಆಸ್ಪತ್ರೆಯಲ್ಲಿ ಕಂಡುಬಂದಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಭೆಯಲ್ಲಿ ಡೀನ್ ವಿರುದ್ಧ ಕಿಡಿ ಕಾರಿದ್ದಾರೆ.