ಬಾಗಲಕೋಟೆ: ವಾಸನದ ಆಸ್ಪತ್ರೆಗೆ ಸಚಿವ ಆರ್ ಬಿ ತಿಮ್ಮಾಪೂರ ಭೇಟಿ ನೀಡಿ ರೈತ ಮುಖಂಡ ಯಲ್ಲಪ್ಪ ಹೆಗಡೆ ಆರೋಗ್ಯ ವಿಚಾರಿಸಿದ್ದಾರೆ.
ಆಗಸ್ಟ್ 28 ರಂದು ಯಲ್ಲಪ್ಪ ಹೆಗಡೆ ಮೇಲೆ ಮುಧೋಳ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮುಧೋಳದಿಂದ ಬೀಳಗಿಗೆ ಬರುವಾಗ ಯಲ್ಲಪ್ಪ ಎರಿಟ್ಗಾ ಕಾರ್ ಮೇಲೆ ೬ ಜನ ಮುಸುಕುದಾರಿಗಳು ದಾಳಿ ನಡೆಸಿ ಪರಾರಿಯಾಗಿದ್ದರು.
ಸದ್ಯ ಬಾಗಲಕೋಟೆಯ ವಾಸನದ ಆಸ್ಪತ್ರೆಯಲ್ಲಿ ಯಲ್ಲಪ್ಪ ಹೆಗಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಆರೋಗ್ಯ ವಿಚಾರಿಸಿದ ಸಚಿವ ತಿಮ್ಮಾಪೂರ ಸಾಂತ್ವನ ಹೇಳಿದ್ದಾರೆ.