Friday, April 11, 2025
Google search engine

Homeರಾಜ್ಯಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ, ಸಾಂತ್ವನ

ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ, ಸಾಂತ್ವನ

ಶಿವಮೊಗ್ಗ : ಇತ್ತೀಚಿಗೆ ಅಗ್ರಾದಲ್ಲಿ ತರಬೇತಿ ವೇಳೆ ನಿಧನರಾಗಿದ್ದ ಭಾರತೀಯ ವಾಯುಸೇನೆಯ ಪ್ಯಾರಾಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿ ಮಂಜುನಾಥ್ ಅವರ ಹೊಸನಗರ ತಾಲೂಕು ಸಂಕೂರಿನ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ತೆರಳಿ ಯೋಧನ ಪತ್ನಿ, ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಮದವರೊಂದಿಗೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಕುಟುಂಬದ ಪ್ರಮುಖ ಶಕ್ತಿಯಾಗಿದ್ದ ಮಂಜುನಾಥ್ ಅವರ ನಿಧನದಿಂದ ಅವರ ಇಡೀ ಕುಟುಂಬ ವರ್ಗಕ್ಕೆ ಕತ್ತಲು ಅವರಿಸಿದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನೇರವಾಗುವುದಾಗಿ ತಿಳಿಸಿದ ಅವರು, ದೇಶ ಕಾಯುವ ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿದ್ದ ಮಂಜುನಾಥ್ ಅವರ ಆಕಸ್ಮಿಕ ನಿರ್ಗಮನ ಅತೀವ ದುಃಖ ತಂದಿದೆ. ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಯೋಧ ಮಂಜುನಾಥ್ ಅವರು ಪ್ರಾಥಮಿಕ ವ್ಯಾಸಂಗ ಮಾಡಿದ್ದ ಸಂಕುರಿನ ಶಾಲೆಯ ಸರ್ವಾoಗಿನ ವಿಕಾಸಕ್ಕೆ ಸ್ಥಳೀಯರು ಮನವಿ ಮಾಡಿಕೊಂಡಿದ್ದು, ಅವರ ಕೋರಿಕೆಯಂತೆ ಮುಂದಿನ ಒಂದು 15 ದಿನಗಳೊಳಗಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಅಲ್ಲದೆ ಸ್ಥಳೀಯರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯೋಧನ ಪುತ್ತಳಿ ಅನಾವರಣಗೊಳಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಅನುಮತಿಗಾಗಿ ಕೊರಿದ್ದಾರೆ. ಪುತ್ತಳಿಯ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು. ರಾಜ್ಯದ ಪ್ರತಿ ಮನೆಯಲ್ಲಿಯೂ ಘನ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ. ಗೃಹಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆಯ ಲಾಭ ಪಡೆದುಕೊಂಡು, ನಾಯಕರಿಗೆ ಶುಭ ಹಾರೈಸಿದ್ದಾರೆ ಎಂದ ಅವರು, ಸರ್ಕಾರವು ತಮ್ಮ ಮನೆಯ ಸದಸ್ಯನಂತೆ ಸಹಾಯಕ್ಕೆ ನಿಂತಿದೆ ಎಂದರು.

RELATED ARTICLES
- Advertisment -
Google search engine

Most Popular