Saturday, April 19, 2025
Google search engine

HomeUncategorizedರಾಷ್ಟ್ರೀಯಇದು ಜನರ ಆದೇಶವಲ್ಲ, ಇವಿಎಂ ಮೇಲೆ ಗಂಭೀರ ಆರೋಪ ಮಾಡಿದ ಉದ್ಧವ್‌ ಠಾಕ್ರೆ

ಇದು ಜನರ ಆದೇಶವಲ್ಲ, ಇವಿಎಂ ಮೇಲೆ ಗಂಭೀರ ಆರೋಪ ಮಾಡಿದ ಉದ್ಧವ್‌ ಠಾಕ್ರೆ

ಮಹಾರಾಷ್ಟ್ರ : ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಮೈತ್ರಿಕೂಟವು ಸೋಲಿನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮೋಸದಾಟ ಎಂದು ಆರೋಪ ಮಾಡಿದ್ದಾರೆ. ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ನಿರಾಕರಿಸಿದ್ದಾರೆ.. ಫಲಿತಾಂಶವು ಮತದಾರರಲ್ಲಿನ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ. ಇದು ಮೋಸದಾಟ ಎಂದು ಹೇಳುವ ಮೂಲಕ ಇವಿಎಂ ಯಂತ್ರಗಳ ಮೇಲೆ ಮತ್ತೆ ಗುಮಾನಿ ವ್ಯಕ್ತಪಡಿಸಿದ್ದಾರೆ.

ಇದು ಮಹಾರಾಷ್ಟ್ರ ಮತದಾರರ ಆದೇಶವಲ್ಲ ಎಂದು ಠಾಕ್ರೆ ಹಿನ್ನಡೆ ಉಂಟಾದ ತಕ್ಷಣ ಹೇಳಿದ್ದಾರೆ. ಚುನಾವಣಾ ಫಲಿತಾಂಶಗಳ ಪ್ರಕಾರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಠಾಕ್ರೆ ಅವರ ಸೇನೆ, ಕಾಂಗ್ರೆಸ್ ಮತ್ತು ಶರದ್ ಪವಾರ್ ಎನ್‌ಸಿಪಿಯ ಮಹಾ ವಿಕಾಸ್‌ ಅಘಾಡಿಯನ್ನು ಜೋರಾಗಿ ಹಿಮ್ಮೆಟ್ಟಿಸಿದೆ.

ಇಷ್ಟೊಂದು ಕಡಿಮೆ ಗೆಲುವುಗಳನ್ನು ಪಡೆಯುವುದು ಅಸಾಧ್ಯ. ಈ ಫಲಿತಾಂಶಗಳನ್ನು ನಾವು ಸ್ವೀಕರಿಸುವುದಿಲ್ಲ ಎಂದು ಉದ್ಧವ್‌ ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular