Tuesday, May 13, 2025
Google search engine

Homeರಾಜ್ಯಆಪರೇಷನ್ ಸಿಂಧೂರ ಯಶಸ್ವಿಗೊಳಿಸಿದ ಸೇನೆಗೆ ಮಂತ್ರಾಲಯದಿಂದ 25 ಲಕ್ಷ ದೇಣಿಗೆ

ಆಪರೇಷನ್ ಸಿಂಧೂರ ಯಶಸ್ವಿಗೊಳಿಸಿದ ಸೇನೆಗೆ ಮಂತ್ರಾಲಯದಿಂದ 25 ಲಕ್ಷ ದೇಣಿಗೆ

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಯಶಸ್ವಿಯಾಗಿ ನಡೆಸಿದ ‘ಆಪರೇಷನ್ ಸಿಂಧೂರʼ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸೇನೆಗೆ ಬೆಂಬಲ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಭಾರತ ರಕ್ಷಣಾ ಸಚಿವಾಲಯಕ್ಕೆ ಪ್ರಸಾದ ರೂಪದಲ್ಲಿ ₹25 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಶ್ರೀಗಳ 13ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಅವರು ಹುತಾತ್ಮ ಯೋಧರಿಗೆ ಸದ್ಗತಿಯ ಪ್ರಾರ್ಥನೆ ಸಲ್ಲಿಸಿ, ಸೇನೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಅಲ್ಲದೇ, ಚಿಕ್ಕಮಗಳೂರು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ₹10 ಲಕ್ಷ ದೇಣಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ನೀಡಲಾಗಿದೆ. ಈ ವೇಳೆ ಧರ್ಮಕರ್ತ ಭೀಮೇಶ್ವರ ಜೋಶಿ ಚೆಕ್ ಹಸ್ತಾಂತರಿಸಿದರು.

ಕಾಪು ತಾಲ್ಲೂಕು ಮಜೂರು ಗ್ರಾಪಂ ವಾರ್ಷಿಕ ಬಜೆಟ್‌ನಲ್ಲಿ ₹10 ಲಕ್ಷ ಸೈನಿಕರ ಹಿತದೃಷ್ಟಿಯಿಂದ ಮೀಸಲಾಗಿದ್ದು, ಇದು ಎಲ್ಲ ಸದಸ್ಯರ ಒಪ್ಪಿಗೆಯಿಂದ ಅಳವಡಿಸಲಾಗಿದೆ ಎಂದು ಅಧ್ಯಕ್ಷ ಪ್ರಸಾದ್ ಶೆಟ್ಟಿ ತಿಳಿಸಿದರು.

ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯ ನಿರ್ದೇಶನದಂತೆ ಕೊಲ್ಲೂರು ಸೇರಿದಂತೆ ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular