ಮಂಡ್ಯ: ದ್ವಿಚಕ್ರ ವಾಹನ ಚಲಾಯಿಸಿ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನ ಪೋಷಕರಿಗೆ 25 ಸಾವಿರ ದಂಡ ವಿಧಿಸಲಾಗಿದೆ.
ಮದ್ದೂರು ನ್ಯಾಯಾಲಯದ ನ್ಯಾಯಾಧೀಶ ಅಜಿತ್ ದೇವರಮನಿಯಿಂದ 25 ಸಾವಿರ ದಂಡ ವಿಧಿಸಿ ಆದೇಶಿಸಲಾಗಿದೆ. ಜೊತೆಗೆ ಪೋಷಕರಿಗೆ ಮತ್ತೊಮ್ಮೆ ವಾಹನ ನೀಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜು.03 ರಂದು ಮದ್ದೂರಿನ ಮೈ- ಬೆಂ ಹೈವೆಯಲ್ಲಿ ತಪಾಸಣೆ ವೇಳೆ ಅಪ್ರಾಪ್ತ ಬಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಈ ಬಗ್ಗೆ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರುವಾ ಹನದ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ್ದು, ನ್ಯಾಯಾಲಯದಲ್ಲಿ ಬಾಲಕನ ತಾಯಿ ವಾಹನದ ಓನರ್ ಮಧುವಂತಿ ದಂಡ ಕಟ್ಟಿದ್ದಾರೆ.