Thursday, May 8, 2025
Google search engine

Homeರಾಜ್ಯಸುದ್ದಿಜಾಲಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮೀರಾ ವೆಲ್ಸ್ ಮತ್ತು ಡಾ.ಶುಬಾ ವರ್ಮಾ ತಂಡ ಭೇಟಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮೀರಾ ವೆಲ್ಸ್ ಮತ್ತು ಡಾ.ಶುಬಾ ವರ್ಮಾ ತಂಡ ಭೇಟಿ

ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಕೋವಿಡ್-19 ಸಂಧರ್ಭದಲ್ಲಿ “ಆಕ್ಸಿಜನ್ ಫಾರ್ ಇಂಡಿಯಾ” ಕಾರ್ಯಕ್ರಮದಡಿಯಲ್ಲಿ ಅಮೇರಿಕಾದ ಮೀರಾ ವೆಲ್ಸ್, ಡಾ.ಶುಭಾ ವರ್ಮಾ ಮತ್ತು ತಂಡದವರು ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಡಾ.ಮೀರಾ ವೆಲ್ಸ್ ಅವರ ಪತಿ ಕೋರ್ಟ್‍ಲ್ಯಾಂಡ್ (ನಿರ್ದೇಶಕರು ಐಬಿಎಂ ಸಂಸ್ಥೆ)ನಿವೃತ ಐಎಎಸ್ ಅಧಿಕಾರಿಯಾದ ಎ.ಕೆ.ಮೊಣ್ಣಪ್ಪ ಮತ್ತು ಸ್ಥಳೀಯ ವೈದ್ಯರಾದ ಡಾ ಸಣ್ಣುವಂಡ ಕಾವೇರಪ್ಪ ಅವರು ಭೇಟಿ ನೀಡಿದರು.

ಈ ಸಮಯದಲ್ಲಿ 2021 ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ 1984 ರ ಬ್ಯಾಚ್‍ನ ಹಳೆಯ ವಿದ್ಯಾರ್ಥಿಗಳು, ದೇಶಾದ್ಯಂತ ಕೋವಿಡ್ ಪೀಡಿತ ಜನರನ್ನು ಬೆಂಬಲಿಸಲು ಆಕ್ಸಿಜನ್ ಫಾರ್ ಇಂಡಿಯಾ ಎಂಬ ಗುಂಪನ್ನು ರಚಿಸಿದರು.

ಡಾ.ಶೋಭಾ ಚೊಟ್ಟೇರಾ, ಮಾಜಿ ಐಎಎಸ್ ಅಧಿಕಾರಿ ಎ.ಕೆ. ಮೊಣ್ಣಪ್ಪ, ನಾಪೆÇೀಕ್ಲುವಿನಿಂದ ಡಾ.ಸಣ್ಣುವಂಡ ಎಂ.ಕಾವೇರಪ್ಪ ಅವರನ್ನು ಸಂಪರ್ಕಿಸಿ ಕೊಡಗಿನಲ್ಲಿ ಆಮ್ಲಜನಕದ ಸಾಂದ್ರೀಕರಣದ ಅಗತ್ಯವಿದೆಯೇ ಎಂದು ವಿಚಾರಿಸಿದರು.

ಇದರ ನಂತರ, ಡಾ.ಕಾವೇರಪ್ಪ ಅವರು ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಅವರನ್ನು ಸಂಪರ್ಕಿಸಿ ಉಪಕರಣದ ಅವಶ್ಯಕತೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ಯುನೈಟೆಡ್ ಸ್ಟೇಟ್ಸ್ ಮೂಲದ ಹೆಸರಾಂತ ವೈದ್ಯಕೀಯ ತಜ್ಞೆ ಡಾ. ಮೀರಾ ವೆಲ್ಸ್ ಅವರ ನೇತೃತ್ವದಲ್ಲಿ, ಮೇ 23, 2021 ರಂದು ಕೊಡಗು ವೈದ್ಯಕೀಯ ಕಾಲೇಜಿಗೆ 53 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಲಾಯಿತು.

ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ ಅವರು ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಈ ಸಂಧರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಸತೀಶ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಹಾಜರಿದ್ದು, ತಂಡದೊಂದಿಗೆ ಆತ್ಮೀಯ ಸಂವಾದ ನಡೆಸಿದರು.

ವಿದೇಶದ ಆರೋಗ್ಯ ತಂತ್ರಜ್ಞಾನ ಮತ್ತು ಈ ದೇಶದ ಆರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಅಗತ್ಯತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ಡಾ.ಕಾವೇರಪ್ಪ ಅವರು ಡಾ.ಮೀರಾ ವೆಲ್ಸ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಭವಿಷ್ಯದಲ್ಲಿ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ನಿರಂತರ ಬೆಂಬಲವನ್ನು ಕೋರಿದರು.

RELATED ARTICLES
- Advertisment -
Google search engine

Most Popular