ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೈಸೂರು ಜಿಲ್ಲಾ ಬಿಜೆಪಿ ರೈತಮೋರ್ಚಾದ ಅಧ್ಯಕ್ಷರಾಗಿ ಮತ್ತು ಹುಣಸೂರು ಕ್ಷೇತ್ರದ ಪ್ರಭಾರಿಯಾಗಿ ಮಿರ್ಲೆ ಶ್ರೀನಿವಾಸ್ ಗೌಡ ಅವರನ್ನು ನೇಮಿಸಲಾಗಿದೆ.
ಮಾಜಿ ವಸ್ತು ಪ್ರಾಧಿಕಾರ ಅಧ್ಯಕ್ಷರಾಗಿರುವ ಮಿರ್ಲೆ ಶ್ರೀನಿವಾಸ್ ಗೌಡ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜೇಂದ್ರ ಅವರ ಸೂಚನೆ ಮೇರೆಗೆ ರೈತ ಮೋರ್ಚ ಅಧ್ಯಕ್ಷರನ್ನಾಗಿ ಮತ್ತು ಹುಣಸೂರು ಕ್ಷೇತ್ರದ ಪ್ರಭಾರಿಯಾಗಿ ನೇಮಿಸಲಾಗಿದೆ
ಈ ಸಂಬಂಧ ಮೈಸೂರು ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಎಲ್.ಮಹದೇವ ಸ್ವಾಮಿ ಅವರು ಅಧಿಕೃತ ಅದೇಶ ಹೊರಡಿಸಿದ್ದು ಬಿ.ಜೆ.ಪಿ.ಪಕ್ಷವನ್ನು ಸದೃಡವಾಗಿ ಸಂಘಟಿಸಲು ಶ್ರಮಿಸುವಂತೆ ತಿಳಿಸಿದ್ದಾರೆ.