ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬರದ ಹಿನ್ನೆಲೆಯಲ್ಲಿ ರಾಜ್ಯದ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಒದಗಿಸುವಲ್ಲಿ ವಂಚಿಸಿದ ಕಾಂಗ್ರೆಸ್ ಸರ್ಕಾರ ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಹಾಗೂ ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ೧ ಕೋಟಿ ೧೫ ಲಕ್ಷ ಪ್ರಮುಖ ಜಾನುವಾರುಗಳಿದ್ದು, ೧ ಕೋಟಿ ೭೨ ಲಕ್ಷ ಚಿಕ್ಕ ಜಾನುವಾರುಗಳಿವೆ ಇವುಗಳ ಸಂರಕ್ಷಣೆಯನ್ನು ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆರೋಪಿಸಿದೆ, ೨೦೨೩-೨೪ ಸಾಲಿನಲ್ಲಿ ಕರ್ನಾಟಕ ರಾಜ್ಯದ ೧೯೬ ತಾಲ್ಲೂಕುಗಳು ತೀವ್ರ ಬರಕ್ಕೆ ಒಳಗಾಗಿದ್ದು ಮತ್ತು ೨೭ ತಾಲ್ಲೂಕುಗಳು ಸಾಧಾರಣ ಬರಕ್ಕೆ ಒಳಗಾಗಿದೆ ಎಂದು ಸರ್ಕಾರ ಘೋಷಿಸಿತ್ತು. ಆದರೆ ಪ್ರಮುಖ ಜಾನುವಾರುಗಳಿಗೆ ಪ್ರತಿದಿನ ೬ ‘ಕೆ.ಜಿ ಒಣ ಮೇವಿನ ಅವಶ್ಯಕತೆಯಿದ್ದು, ಚಿಕ್ಕ ಜಾನುವಾರುಗಳಿಗೆ ( ಕುರಿ ಮತ್ತು ಆಡು) ೧/೨ ಕೆ.ಜಿ ಒಣ ಮೇವು ಅವಶ್ಯಕತೆಯಿದೆ. ಇದ್ಯಾವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ ಎಂದು ನಮ್ಮ ಆರೋಪಗಳಿಗೆ ರಾಜ್ಯ ಸರ್ಕಾರ ಉತ್ತರಿಸ. ಬೇಕಿದೆ ಎಂದಿದ್ದಾರೆ.
ಹಸಿರು ಮೇವನ್ನು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂದು ಕಂಡು ಬಂದಿದೆ. ಹಸಿರು ಮೇವನ್ನು ಬೆಳೆಯಲು ಗ್ರಾಮಗಳಲ್ಲಿರುವ ಗೋಮಾಳಗಳನ್ನು ಮತ್ತು ಖಾಲಿ ಜಾಗಗಳನ್ನು ಬೆಳೆಯಲು ಗ್ರಾಮಗಳಲಿರುವ ಗುರುತಿಸಬೇಕಿತ್ತು, ಇದ್ಯಾವುದು ನಡೆದಿಲ್ಲ, ಕೆರೆ ಮತ್ತು ನದಿ ಪಾತ್ರಗಳಲ್ಲಿ ಜಾಗವನ್ನು ಗುರುತಿಸಿ ಹಸಿರು ಮೇವನ್ನು ಬೆಳೆಯಬೇಕಿತ್ತು.
ಈ ಯೋಜನೆಯು ಅನುಷ್ಠಾನವಾಗಿ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮಿನಿ ಕಿಟ್ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕು ಎಂಬ ಮಾರ್ಗ ಸೂಚಿಯನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಪಾಲಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿರುವ ಅವರು ಬರ, ಮೇವು ಹಾಗೂ ಕುಡಿಯುವ ನೀರು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದಿರುವ ಮಿರ್ಲೆ ಶ್ರೀನಿವಾಸ್ ಗೌಡ ಅವರು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಬರದ ಹಿನ್ನೆಲೆಯಲ್ಲಿ ಮೇವು, ಕುಡಿಯುವ ನೀರು ಒದಗಿಸಲು ಶಾಸಕರು ಹಾಗೂ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪ ಮಾಡಿದರು.