Thursday, April 17, 2025
Google search engine

Homeರಾಜ್ಯಸುದ್ದಿಜಾಲಮಿರ್ಲೆ ಗ್ರಾಮ: ಗುರುವಂದನಾ,ಅಪೂರ್ವ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಮಿರ್ಲೆ ಗ್ರಾಮ: ಗುರುವಂದನಾ,ಅಪೂರ್ವ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಹೊಸೂರು : ಶಿಕ್ಷಣ ಕಲಿಸಿ ಜೀವನಕ್ಕೆ ದಾರಿ ಮಾಡಿಕೊಟ್ಟಂತ ಗುರು ವೃಂದವನ್ನು ನೆನೆದು ಪೂಜಿಸುವಂತಹ ಕೆಲಸವನ್ನು ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತೇನೆ ಎಂದು ಬೆಂಗಳೂರು ಬೆಸ್ಕಾ ಹಣಕಾಸು ನಿರ್ದೇಶಕ ದರ್ಶನ್ ಜನಾರ್ಧನ್ ಹೇಳಿದರು

ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಎಂ ಟಿ. ಎಂ ಪಂಕ್ಷನ್ ಹಾಲಿನಲ್ಲಿ ನಡೆದ ಗುರುವಂದನಾ ಮತ್ತು ಅಪೂರ್ವ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .

ಪ್ರಾಥಮಿಕ ಪ್ರೌಢ ಪದವಿ ಪೂರ್ವ ಶಾಲೆಗಳಲ್ಲಿ ಶಿಕ್ಷಣವನ್ನು ಕಲಿಸಿದಂತಹ ಎಲ್ಲಾ ಪೂಜ್ಯ ಗುರುಗಳನ್ನು ಒಂದೆಡೆ ಸೇರಿಸಿ ನೆನೆಯುವಂತಹ ಕಾರ್ಯಕ್ರಮ ಜನಮನದಲ್ಲಿ ಶಾಶ್ವತವಾಗಿ ಇಡುವಂತಹ ದಿನ ಇದು ಆಗಿದೆ ಎಂದರು.

ಮಿರ್ಲೆ ಗ್ರಾಮ ಬತ್ತದ ಕಣಜ ಎಂಬ ಹೆಸರಿನೊಂದಿಗೆ ಶಿಕ್ಷಣ ಆರೋಗ್ಯ ಸಾಮಾಜಿಕ ಕಳಕಳಿಗೆ ಹೆಸರಾಗಿದ್ದು ನಮ್ಮ ಪೂರ್ವಿಕರ ಕಾಲದಿಂದಲೂ ವಿದ್ಯೆಗಾಗಿ ಬಂದ ವಿದ್ಯಾರ್ಥಿಗಳನ್ನು ವಿದ್ಯೆಯ ಜೊತೆಗೆ ಅನ್ನ ಆರೋಗ್ಯವನ್ನು ನೀಡಿದಂತ ಕೀರ್ತಿ ಈ ಗ್ರಾಮಕ್ಕಿದೆ ಮಿರ್ಲೆ ಗ್ರಾಮದಲ್ಲಿ ಜನಿಸಿದಂತ ವ್ಯಕ್ತಿಗಳು ರಾಜ್ಯ ಮತ್ತು ದೇಶದಲ್ಲಿ ಹೆಸರು ಮಾಡಿರುವುದು ವಿಶೇಷವಾಗಿದ್ದು ವಿದೇಶದಲ್ಲಿಯೂ ಸಹ ಹೆಸರು ಮಾಡುವ ಮೂಲಕ ಮಿಥಿಲಾ ನಗರವನ್ನು ಎಂದೆಂದಿಗೂ ಜನಮನರ ಮನಸ್ಸಿನಲ್ಲಿರಲಿ ಎಂದು ತಮ್ಮ ಆಶಯ ನುಡಿಗಳನ್ನು ನುಡಿದರು.
ಇಂದು 60ಕ್ಕೂ ಹೆಚ್ಚು ನಿವೃತ್ತ ಗುರುಗಳನ್ನು ಕರೆದು ಸನ್ಮಾನಿಸುವ ಮೂಲಕ ಅವರ ಹಿತ ನುಡಿಗಳನ್ನು ಕೇಳುವ ಜೊತೆಗೆ ಅವರನ್ನು ನೋಡುತ್ತಿರುವುದು ಮತ್ತೊಂದು ವಿಷಯವಾಗಿದ್ದು ಮಿರ್ಲೆ ಗ್ರಾಮದ ಒಂಬತ್ತು ಹಳ್ಳಿಗಳ ಒಕ್ಕೂಟದೊಂದಿಗೆ ರಚನೆಗೊಂಡ ಎಲ್ಲಾ ಹಳೆಯ ವಿದ್ಯಾರ್ಥಿಗಳು ಇನ್ನು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗುರು ಹಿರಿಯರಿಗೆ ಗೌರವ ಕೊಡುವುದು ಹೇಗೆ ಎಂಬುದನ್ನು ಯುವ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಮಾಡಿ ಎಂದು ತಲೆ ನೀಡುವುದರ ಜೊತೆಗೆ ಇಂತಹ ಸಮ್ಮಿಲನದಲ್ಲಿ ನನ್ನನ್ನು ಒಬ್ಬನನ್ನಾಗಿ ನೇಮಿಸಿಕೊಂಡಿದ್ದಕ್ಕೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಮೈಸೂರು ನಿರ್ಮಿತಿ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ ಟಿ ಮಂಜುನಾಥ್ ಮಾತನಾಡಿ ಸಾಧನೆ ಎಂಬ ಶಿಖರವನ್ನೇ ಇರಲು ಹಳೆಯದನ್ನು ನೆನೆಯಬೇಕು ಅಕ್ಷರ ಅನ್ನ ಉಣಿಸಿದ ಗುರುವನ್ನು ನೆನೆಯಬೇಕು ಅದಕ್ಕಾಗಿ ನನ್ನದೊಂದು ಕಿರು ಕಾಣಿಕೆಯನ್ನು ನೀಡುತ್ತೇನೆ ಎಂಬ ಮನೋಭಾವದಿಂದ ದೂರ ದೂರದಿಂದ ಬಂದಂತ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಾ ನೀವು ಗುರುವಿನಿಂದ ಬೆಳೆದು ದೊಡ್ಡವರಾಗಿದ್ದೀರಿ ನಿಮ್ಮಂತೆ ನಿಮ್ಮ ಅಕ್ಕಪಕ್ಕದ ಮನೆಯ ಮಕ್ಕಳು ಬೆಳೆಯಲು ಸಹಾಯ ಸಹಕಾರ ನೀಡಿ ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳ ನೇತೃತ್ವವನ್ನು ವಹಿಸಿದಂತ ಎಂ ಎಂ ಮಹದೇವ್ ಪ್ರಸ್ತಾವಿಕ ಮಾತುಗಳನ್ನಾಡಿ ಏಪ್ರಿಲ್ ಮೊದಲ ವಾರದಲ್ಲಿ ಐದು ಜನರಿದ್ದ ಹಳೆಯ ವಿದ್ಯಾರ್ಥಿಗಳು ಮೈಸೂರಿನಲ್ಲಿ ಸಭೆ ಮಾಡಿದಾಗ 35 ಜನಕ್ಕೆ ಬಂದು ನಿಂತರು ವಡ್ಡರಕೊಪ್ಪಲು ಗ್ರಾಮದಲ್ಲಿ ಮತ್ತೆ ಸಭೆ ಮಾಡಿದಾಗ 65 ಜನರಿದ್ದ ನಾವು ಇಂದು ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದ್ದು ಈಗ ತಾನೆ ಜೇನುಗೂಡು ಕಟ್ಟಲು ಪ್ರಾರಂಭವಾಗಿದೆ ಮುಂದೊಂದು ದಿನ ಬೃಹತ್ಕಾರವಾಗಿ ಬೆಳೆದು ಮಿರ್ಲೆಯ ಜೊತೆಗೆ ಹುನಸಮ್ಮ ತಾಯಿಯ ಕೃಪೆಯೊಂದಿಗೆ ಆ ತಾಯಿಯ ಜಾತ್ರೆಗೆ ಸೇರಿದ 9 ಗ್ರಾಮಗಳ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಗುರುಗಳನ್ನು ನೆನೆಯುವ ಜೊತೆಗೆ ಪ್ರೋತ್ಸಹಿಸುವ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಇನ್ನು ಹೆಚ್ಚು ಹೆಚ್ಚು ಹಳೆಯ ವಿದ್ಯಾರ್ಥಿಗಳ ಜೊತೆಗೆ ಈ ಭಾಗದಲ್ಲಿರುವ ಅತ್ಯುನ್ನತ ಹುದ್ದೆಯಲ್ಲಿರುವಂತ ನೌಕರರು ಉದ್ದಿಮೆದಾರರು ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚು ವಿಶ್ರಾಂತ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರನ್ನು ಸನ್ಮಾನಿಸಿದರು ವೇದಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ ಮರಿಸ್ವಾಮಿ, ವಲಯ ಅರಣ್ಯಾಧಿಕಾರಿ ಎಂ.ಎ.ರತನ್ ಕುಮಾರ್, ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಗ್ರಾ.ಪಂ.ಅಧ್ಯಕ್ಷ ಬಾಲು , ರಿಲಯನ್ಸ್ ಜಿಯೋ ಉಪಾಧ್ಯಕ್ಷ ಮನೋಹರ , ವಿಎಸ್ಎಸ್ ನ ಮಾಜಿ ಅಧ್ಯಕ್ಷ ಅರವಿಂದ ಹಳೆಯ ವಿದ್ಯಾರ್ಥಿ ನರಸಿಂಹ, ವಡ್ಡರಕೊಪ್ಪಲು ಶ್ರೀಧರ್, ಪತ್ರ ಬಹರಗಾರ ರಾಜೀವ್, ಧನಂಜಯ,, ರಾಧಾಕೃಷ್ಣ, ವಕೀಲ ತಿಮ್ಮಪ್ಪ, ಪವಿತ್ರ , ದೈಹಿಕ ಶಿಕ್ಷಕಿ ಪೂರ್ಣಿಮಾ ,ಶಿಕ್ಷಕಿ ಕಲ್ಪನಾ ಧನಂಜಯ್, ಪಂಕಜ ಸುಬ್ಬ ಶೆಟ್ಟಿ ,ಮಧು ಕುಮಾರ್, ಸುಂದರೇಶ, ಎಸ್.ಕೆ.ರಮೇಶ್ ,ಹೊಸಟ್ಟಿರಘು ಸೇರಿದಂತೆ ಹಳೆಯ ವಿದ್ಯಾರ್ಥಿಗಳು ನೌಕರರು ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular