Friday, April 18, 2025
Google search engine

Homeಅಪರಾಧಲಕ್ಷಾಂತರ ರೂ.ಹಣ ದುರುಪಯೋಗ: ಪಿಡಿಓ ವಿರುದ್ಧ ಮೇಲಾಧಿಕಾರಿಯಿಂದ ದೂರು ದಾಖಲು

ಲಕ್ಷಾಂತರ ರೂ.ಹಣ ದುರುಪಯೋಗ: ಪಿಡಿಓ ವಿರುದ್ಧ ಮೇಲಾಧಿಕಾರಿಯಿಂದ ದೂರು ದಾಖಲು

ದಾವಣಗೆರೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೋರ್ವರು ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಗಳೂರು ತಾಲೂಕಿನ ಬಿಳಿಚೋಡು ಗ್ರಾಪಂನಲ್ಲಿ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಪ್ರಸ್ತುತ ದೊಣ್ಣೆಹಳ್ಳಿ ಗ್ರಾಪಂನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿರುವ ತಿಮ್ಮಪ್ಪ ಟಿ. ಎಂಬುವರ ವಿರುದ್ಧ 27.51 ಲಕ್ಷ ರೂ. ಹಣ ದುರುಪಯೋಗದ ಬಗ್ಗೆ ಜಗಳೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಕೆಂಚಪ್ಪ ಎನ್.ಕೆ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಳಿಚೋಡು ಗ್ರಾಪಂನಲ್ಲಿ 2022-23ನೇ ಸಾಲಿನಲ್ಲಿ ಮಳೆ, ಪ್ರವಾಹದಿಂದ ಹಾನಿಗೊಳಗಾದ ಕೆರೆಗಳ ದುರಸ್ತಿಗೆ ಬಿಡುಗಡೆಯಾಗಿದ್ದ 2.84 ಲಕ್ಷ ರೂ.ಗಳನ್ನು ಕೆರೆಯ ಅಭಿವೃದ್ಧಿಗೆ ಬಳಸದೆ ನಿಯಮಬಾಹೀರವಾಗಿ ಇತರೆ ಉದ್ದೇಶಕ್ಕೆ ವೆಚ್ಚ ಮಾಡಿದ್ದಾರೆ. ಇದೇ ತಾಲೂಕಿನ ಬಸವನಕೋಟೆ ಗ್ರಾಪಂನಲ್ಲಿ 15ನೇ ಹಣಕಾಸು ಯೋಜನೆಯ 24.67ಲಕ್ಷ ರೂ. ಅನುದಾನವನ್ನು ಈ-ಗ್ರಾಮ ಸ್ವರಾಜ್ ತಂತ್ರಾಂಶದ ಮೂಲಕ ಪಾವತಿ ಮಾಡದೆ ಚೆಕ್ ಮೂಲಕ ಅಧ್ಯಕ್ಷರ ಸಹಿ ಪಡೆಯದೆ, ಸ್ವತಃ ಸಹಿ ಮಾಡಿಕೊಂಡು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದಾರೆ.

ತಿಮ್ಮಪ್ಪ ಅವರು ಒಟ್ಟು 27.51 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular