Sunday, April 20, 2025
Google search engine

Homeಅಪರಾಧದುಷ್ಕರ್ಮಿಗಳಿಂದ ಗುಡಿಸಲಿಗೆ ಬೆಂಕಿ: ತಾಯಿ-ಮಗಳು ಸಜೀವ ದಹನ, ಇಬ್ಬರಿಗೆ ಗಾಯ

ದುಷ್ಕರ್ಮಿಗಳಿಂದ ಗುಡಿಸಲಿಗೆ ಬೆಂಕಿ: ತಾಯಿ-ಮಗಳು ಸಜೀವ ದಹನ, ಇಬ್ಬರಿಗೆ ಗಾಯ

ಮುಧೋಳ: ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ಹಾಕಿ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಸಮೀಪದ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

ಜೈಬಾನ ಪೆಂಡಾರಿ (60), ಶಬಾನ ಪೆಂಡಾರಿ (20) ಕೊಲೆಯಾದವರು. ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರಗೆ ದಾಖಲಿಸಲಾಗಿದೆ.

ರಾತ್ರಿ ವೇಳೆ‌ ದಸ್ತಗಿರಸಾಬ ಪೆಂಡಾರಿ ಅವರ ಕುಟುಂಸ್ಥರು ತೋಟದ ಶೆಡ್ಡಿನಲ್ಲಿ ಮಲಗಿದ್ದಾಗ. ದುಷ್ಕರ್ಮಿಗಳು ಸಿಂಟೆಕ್ಸ್ ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಎಚ್ ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲವನ್ನು ಲಾಕ್ ಮಾಡಿ ಇಡೀ ಕುಟುಂಬವನ್ನು ಮುಗಿಸಲು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ತಾಯಿ – ಮಗಳ‌ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ.

ಎಸ್ಪಿ ಅಮರಮಾಥರೆಡ್ಡಿ ಭೇಟಿ‌ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

RELATED ARTICLES
- Advertisment -
Google search engine

Most Popular