Friday, January 16, 2026
Google search engine

Homeಸ್ಥಳೀಯಮಂಡ್ಯದಲ್ಲಿ ಸಂಕ್ರಾಂತಿ ಕಿಚ್ಚು ಹಾಯಿಸುವ ವೇಳೆ ಅವಘಡ

ಮಂಡ್ಯದಲ್ಲಿ ಸಂಕ್ರಾಂತಿ ಕಿಚ್ಚು ಹಾಯಿಸುವ ವೇಳೆ ಅವಘಡ

ಮಂಡ್ಯ : ನೆನ್ನೆ ಸಂಕ್ರಾಂತಿ ಸಡಗರ-ಸಂಭ್ರಮದಲ್ಲಿ ಕಿಚ್ಚು ಹಾಯಿಸುವ ವೇಳೆ ಯಡವಟ್ಟಾಗಿದೆ. ಬಿಂಕಿ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿದ್ದಕ್ಕೆ, ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಹೊಸಹಳ್ಳಿಯಲ್ಲಿ ನಡೆದಿದೆ.

ಸಂಕ್ರಾಂತಿ ಸಂಭ್ರಮದ ಹಿನ್ನೆಲೆ ಕಿಚ್ಚುಹಾಯಿಸಲು ರೈತರು ಎತ್ತುಗಳನ್ನು ಶೃಂಗರಿಸಿದ್ದರು. ಸೂರ್ಯಾಸ್ತದ ಬಳಿಕ ಕಿಚ್ಚುಹಾಯಿಸಲು ಆರಂಭಿಸಲಾಗಿತ್ತು. ಈ ವೇಳೆ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿ ಓಡಿಹೋಗಿವೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.

ಮಕರ ಸಂಕ್ರಾಂತಿ ವೇಳೆ ಕೆಲವೆಡೆ ಎತ್ತುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಕಿಚ್ಚು ಹಾಯಿಸಿದರೆ ರಾಸುಗಳಿಗೆ ರೋಗಗಳು ದೂರವಾಗುತ್ತವೆ ಎಂಬುದು ವಾಡಿಕೆಯಾಗಿದೆ.

RELATED ARTICLES
- Advertisment -
Google search engine

Most Popular