ಚಾಮರಾಜನಗರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವ್ ಶನಿವಾರದಿಂದ ನಾಪತ್ತೆಯಾದ್ದು, ಅವರ ಕಾರು ಚಾಮರಾಜನಗರದ ಹನೂರು ಬಳಿ ಪತ್ತೆಯಾಗಿದೆ. ಸಿಪಿವೈ ಅವರ ತಂಗಿಯ ಗಂಡ ಮಹದೇವ್ ಅವರು ಚನ್ನಪಟ್ಟಣದ ವಡ್ಡರದೊಡ್ಡಿಯ ತೋಟದ ಮನೆಯಿಂದ ನಾಪತ್ತೆಯಾಗಿದ್ದಾರೆ. ಮನೆಯಲ್ಲಿದ್ದ ದಾಖಲೆಗಳು, ಬಟ್ಟೆಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಹನೂರು ಬಳಿ ಕಾರು ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಮಹದೇವ್ ಅವರ ಬಿಳಿಬಣ್ಣದ ಏಂ ೪೨೦೦೧೨ ನಂಬರ್ ನ ಮಾರುತಿ ಬ್ರಿಜಾ ಕಾರು ಪತ್ತೆಯಾಗಿದೆ. ಕಾರನ್ನು ಲಾಕ್ ಮಾಡಲಾಗಿದ್ದು, ಮೊನ್ನೆ ರಾತ್ರಿಯಿಂದಲೂ ಅಲ್ಲೆ ಇದೆ ಎಂದು ತಿಳಿದುಬಂದಿದೆ. ಕಾರನ್ನು ಸ್ವತಃ ಮಹದೇವಯ್ಯ ಅವರೇ ನಿಲ್ಲಿಸಿ ಹೋಗಿದ್ದಾರಾ ಅಥವಾ ಇನ್ಯಾರಾದರು ನಿಲ್ಲಿಸಿ ಹೋಗಿದ್ದಾರಾ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ರಾಮಾಪುರ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.